ಕಾಟೇರ ಸಿನಿಮಾದ ಯಶಸ್ಸಿನಲ್ಲಿ ಇರುವ ನಟ ದರ್ಶನ್ ಅವರಿಗೆ ಇದೀಗ ಸಂ’ಕ’ಷ್ಟ ಎದುರಾಗಿದೆ ಸಾಮಾಜಿಕ ಜಾಲತಾಣಗಳಲ್ಲಿ ನಟ ದರ್ಶನ್ ಹಾಗೂ ಪವಿತ್ರ ಗೌಡ ಅವರ ಬಗ್ಗೆ ನಾನಾ ರೀತಿಯಾದಂತಹ ಸುದ್ದಿಗಳು ಹರಿದಾಡುತ್ತಿದೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಪವಿತ್ರ ಗೌಡ ಅವರಿಗೆ ಖಡಕ್ಕಾಗಿ ಉತ್ತರವನ್ನು ನೀಡುತ್ತಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ವಿವಾದ ಕಳೆದ ಕೆಲವು ದಿನಗಳಿಂದ ಸ್ಯಾಂಡಲ್ವುಡ್ ಗೆ ಬೆಂಕಿ ಹಚ್ಚಿದೆ.
25 ಕೋಟಿ ವಂ’ಚನೆ ಪ್ರಕರಣದಿಂದ ಪ್ರಾರಂಭವಾದ ವಿವಾದ ಬಳಿಕ ಹ’ಲ್ಲೇ, ಇಂದ್ರಜಿತ್ ಆರೋಪ, ನಿರ್ಮಾಪಕ ಉಮಾಪತಿ ಮೇಲೆ ಮುನಿಸು, ದೊಡ್ಮನೆ ವಿಚಾರದ ನಂತರ ನಿರ್ದೇಶಕ ಪ್ರೇಮ ವರೆಗೂ ಬಂದಿದೆ ಇದೀಗ ಪವಿತ್ರ ಗೌಡ ಅವರ ಜೊತೆಗಿನ ಸ್ನೇಹದ ಕುರಿತಾದ ವಿಚಾರದ ವರೆಗು ಬಂದು ನಿಂತಿದೆ. ಡಿ ಬಾಸ್ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುವ ದರ್ಶನ್ ಅವರಿಗೆ ಮೇಲಿಂದ ಮೇಲೆ ಸಮಸ್ಯೆಗಳು ಎದುರಾಗುತ್ತಿದೆ ಕೌಟುಂಬಿಕ ಕ’ಲಹವೇ ದರ್ಶನ್ ಅವರ ಸಿನಿಮಾ ಲೈಫ್ಗಗು ದೊಡ್ಡ ಅಡಿ ಎಂಬ ಆರೋಪ ಕೇಳಿ ಬರುತ್ತಿದೆ.
ಹೀಗಿರುವಾಗಲೇ ನೆನ್ನೆ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ಗರಂ ಆಗಿ ಪವಿತ್ರ ಗೌಡ ಅವರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ ಇಷ್ಟೆಲ್ಲ ಬೆಳವಣಿಗೆಯ ನಡುವೆ ಇಂದು ಪವಿತ್ರ ಗೌಡ ಅವರು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ನಟ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಪವಿತ್ರ ಗೌಡ ಹಾಗು ದರ್ಶನ್ ಜೊತೆಗಿನ ಖಾಸಗಿ ಫೋಟೋಗಳನ್ನು instagram ನಲ್ಲಿ ಶೇರ್ ಮಾಡಿ ಹತ್ತು ವರ್ಷದ ಸಂಬಂಧ ಎಂದು ಹೇಳಿದ್ದಾರೆ ಅಲ್ಲದೆ ದರ್ಶನ್ ಅವರ ಜೊತೆಗಿನ ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ ಈ ಫೋಟೋಗಳು ಹೊರ ಬರುತ್ತಿದ್ದ ಹಾಗೆ ವಿಜಯಲಕ್ಷ್ಮಿ ಅವರಿಗೆ ಸಿಡಿಲು ಬಡಿದ ಹಾಗೆ ಆಗಿದೆ.
ಈ ಹಿಂದೆ ಪವಿತ್ರ ಅವರ ಮಗಳು ಖುಷಿ ಗೌಡ ಅವರ ಜೊತೆ ದರ್ಶನ್ ಹುಟ್ಟುಹಬ್ಬ ಆಚರಿಸಿದ್ದು ಎಲ್ಲೆಡೆ ವೈರಲ್ ಆಗಿತ್ತು. ಅಲ್ಲದೆ ದರ್ಶನ ಅವರನ್ನು ಸುಬ್ಬ ಎಂದು ಕರೆಯುತ್ತಾರೆ ಈ ಹಿಂದೆ ಇವರು ದರ್ಶನ್ ಜೊತೆ ಆಚರಿಸಿದ ಹುಟ್ಟು ಹಬ್ಬದ ಕೇಕ್ ಮೇಲೆ ಸುಬ್ಬ ಎಂದು ಬರೆದಿತ್ತು. ನಾನು ನನ್ನನ್ನು ಪ್ರೀತಿಸುವವರ ಜೊತೆಯಲ್ಲಿ ಸಂತೋಷದಿಂದ ಇರಬೇಕೆಂದು ನಿಶ್ಚಯಿಸಿದ್ದೇನೆ ನಾನು ಅವರ ಬಾಳಲ್ಲಿ ಬರುವ ಮುನ್ನ ಅವರಿಬ್ಬರ ಬಗ್ಗೆ ಇರುವ ಸಮಸ್ಯೆ ಬಗ್ಗೆ ನಿಮಗೆಲ್ಲರಿಗೂ ಗೊತ್ತು ಎಂದು ಭಾವಿಸಿದ್ದೇನೆ ಎಂದು ಪವಿತ್ರ ಗೌಡ ದರ್ಶನ್ ಪತ್ನಿ ಮಾಡಿರುವ ಪೋಸ್ಟ್ ಗೆ ತಿರುಗೇಟು ನೀಡಿದ್ದಾರೆ.
ಪವಿತ್ರ ಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಹಾಗೂ ಅವರ ಜೊತೆಗಿನ ತಮ್ಮ ಫೋಟೋಗಳನ್ನು ಹಂಚಿಕೊಂಡು ಒಂದು ದಶಕ ಕಳೆದಿದೆ ಇದು ಶಾಶ್ವತವಾಗಿರಲಿ ನಮ್ಮ ಸಂಬಂಧಕ್ಕೆ ಹತ್ತು ವರ್ಷಗಳಾಗಿವೆ ಥ್ಯಾಂಕ್ಯು ( thank you) ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿ ಉತ್ತರವಾಗಿ ಪವಿತ್ರ ಗೌಡ ಅವರ ಪತಿ ಸಂಜಯ್ ಸಿಂಗ್ ಮತ್ತು ಅವರ ಮಗಳ ಫೋಟೋವನ್ನು instagram ನಲ್ಲಿ ಪೋಸ್ಟ್ ಮಾಡಿರುವ ವಿಜಯಲಕ್ಷ್ಮಿ ದರ್ಶನ್ ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಪ್ರಗ್ನೆ ಇರಬೇಕು ಎಂದು ನಾನು ಭಾವಿಸುತ್ತೇನೆ ಅದು ಅವಳ ಪಾತ್ರ ಮತ್ತು ನೈತಿಕ ನಿಲುವಿನ ಬಗ್ಗೆ ಮಾತನಾಡುತ್ತದೆ.
ಪುರುಷ ವಿವಾಹಿತನೆಂದು ತಿಳಿದರೂ ಕೂಡ ತಮ್ಮ ವೈಯಕ್ತಿಕ ಅಗತ್ಯಗಳು ಮತ್ತು ಕಾರ್ಯಸೂಚಿಗಾಗಿ ಅವರೊಂದಿಗೆ ಇರುವುದನ್ನು ಆಯ್ಕೆ ಮಾಡಿಕೊಳ್ಳುತ್ತಾಳೆ ಎಂದು ಹೇಳಿದ್ದಾರೆ ಈ ಚಿತ್ರಗಳು ಸ್ಪಷ್ಟವಾಗಿವೆ. ಖುಷಿ ಗೌಡ ಪವಿತ್ರ ಮತ್ತು ಸಂಜಯ್ ಸಿಂಗ್ ಅವರ ಮಗಳು ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಮಾತನಾಡುವುದಿಲ್ಲ ಸಾಮಾಜಿಕ ಮಾಧ್ಯಮವನ್ನು ತೆಗೆದುಕೊಳ್ಳುವುದಿಲ್ಲ ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ವಿಜಯಲಕ್ಷ್ಮಿ ದರ್ಶನ್ ಅವರು ತಿಳಿಸಿದ್ದಾರೆ.
ಡಿ ಬಾಸ್ ದರ್ಶನ್ ಎಂದರೆ ಕಾಂಟ್ರವರ್ಸಿ ಎಂಬ ಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ವರ್ತಮಾನಗಳು ನಡೆಯುತ್ತಿದೆ ತಮ್ಮ ಅಮೋಘ ಅಭಿನಯದ ಮೂಲಕ ಅಭಿಮಾನಿಗಳ ಮನದಲ್ಲಿ ಮನೆ ಮಾಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿಗೆ ಕಂಟ್ರೋವರ್ಸಿಗಳಲ್ಲಿ ಸಿಲುಕಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೂವಿ ಕಾಟೇರ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆಯುತ್ತಿದೆ ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ ಪವಿತ್ರ ಗೌಡ ಮತ್ತು ವಿಜಯಲಕ್ಷ್ಮಿ ನಡುವೆ ಒಂದಷ್ಟು ವಿವಾದ ಸೃಷ್ಟಿಯಾಗಿದೆ.
ವಿಜಯಲಕ್ಷ್ಮಿ ಹಾಗೂ ಪವಿತ್ರ ಗೌಡ ಅವರ ನಡುವೆ ನಡೆಯುತ್ತಿರುವ ವಿವಾದದ ಬಗ್ಗೆ ಸಾಕಷ್ಟು ಜನರು ಹೇಳಿಕೆಯನ್ನು ನೀಡುತ್ತಿದ್ದಾರೆ ಒಂದಷ್ಟು ಜನರು ಪವಿತ್ರ ಗೌಡ ಅವರ ಪರವಾಗಿ ನಿಂತು ಮಾತನಾಡಿದರೆ ಮತ್ತಷ್ಟು ಜನ ವಿಜಯಲಕ್ಷ್ಮಿ ಅವರ ನಿಲುವನ್ನು ಒಪ್ಪಿಕೊಳ್ಳುತ್ತಿದ್ದಾರೆ. ದರ್ಶನ್ ಅವರು ಪವಿತ್ರ ಗೌಡ ಅವರ ಮಗಳ ಹುಟ್ಟುಹಬ್ಬದ ಸಮಯದಲ್ಲಿ ಕಾಣಿಸಿಕೊಂಡಿದ್ದರು ಈ ವಿಡಿಯೋವನ್ನು ಪವಿತ್ರ ಗೌಡ ಅವರು instagram ಖಾತೆಯಲ್ಲಿ ಹಂಚಿಕೊಂಡಿದ್ದರು.
ಹಾಗೆಯೇ ದರ್ಶನ್ ಹುಟ್ಟು ಹಬ್ಬದ ಸಂದರ್ಭದಲ್ಲಿ ಕೇಕ್ ಮೇಲೆ ಹ್ಯಾಪಿ ಬರ್ತಡೆ ಸುಬ್ಬ ಎನ್ನುವಂತಹ ಸಾಲುಗಳು ಬರೆದಿದ್ದು ಇದನ್ನು ನೋಡಿದರೆ ಎಲ್ಲರಿಗೂ ತಿಳಿಯುವುದು ಪವಿತ್ರ ಗೌಡ ಅವರು ದರ್ಶನ್ ಅವರನ್ನು ಪ್ರಸುಬ್ಬ ಎಂದು ಕರೆಯುತ್ತಿದ್ದರು. ನಾನು ದರ್ಶನ್ ಅವರ ಜೊತೆಗಿನ ಸಂಬಂಧವನ್ನು ಮುಂದುವರಿಸಲು ಇಷ್ಟಪಡುತ್ತೇನೆ ನಾನು ಅವರ ಜೊತೆಯಲ್ಲಿ ಯಾವಾಗಲೂ ಖುಷಿಯಾಗಿ ಇರಬೇಕು ಎಂದು ಪವಿತ್ರ ಗೌಡ ಅವರು ಹೇಳಿಕೆಯನ್ನು ನೀಡಿದ್ದಾರೆ. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಕಾಮೆಂಟ್ಸ್ ಮೂಲಕ ತಿಳಿಸಿ.