ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿಗೆ ಮತ್ತೆ ಅವಕಾಶ.!

WhatsApp Group Join Now
Telegram Group Join Now

ಇತ್ತೀಚಿನ ದಿನಗಳಲ್ಲಿ ರೇಷನ್ ಕಾರ್ಡ್ (Ration Card) ಬಹಳ ಪ್ರಮುಖವಾಗಿರುವ ಗುರುತಿನ ಚೀಟಿ ಆಗಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕೂಡ ರೇಷನ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಹವಣಿಸುತ್ತಿದ್ದಾರೆ. ಹಾಗಾಗಿ, ಬಿಪಿಎಲ್ ಕಾರ್ಡ್ (BPL card), ಅಂತ್ಯೋದಯ ರೇಷನ್ ಕಾರ್ಡ್ ಪ್ರಮುಖ ಗುರುತಿನ ಚೀಟಿಯಾಗಿ ಬಳಸಲ್ಪಡುತ್ತಿದೆ.

ಅದರಲ್ಲೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ (guarantee schemes) ಯಿಂದಾಗಿ ಈಗ ರೇಷನ್ ಕಾರ್ಡಿನ ಬೆಲೆಯೂ ಕೂಡ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ ಈವರೆಗೆ ಅರ್ಜಿ ಸಲ್ಲಿಸಿ, ಸುಮ್ಮನಾಗಿದ್ದ ಜನರು ಈಗ ಮತ್ತೆ ಎಚ್ಚೆತ್ತುಕೊಂಡಿದ್ದು ನಮಗೆ ರೇಷನ್ ಕಾರ್ಡ್ ವಿತರಣೆ ಮಾಡಿ ಎಂದು ಸರ್ಕಾರದ ಮೊರೆ ಹೋಗಿದ್ದಾರೆ.

ಆಹಾರ ಇಲಾಖೆಯಿಂದ ಬಡವರಿಗೆ ರಾಜ್ಯದಲ್ಲಿ ವಾಸಿಸುವ ಬಡತನ ರೇಖೆಗಿಂತ ಕೆಳಗಿರುವ (below poverty line) ಕುಟುಂಬಗಳಿಗೆ ಉಚಿತವಾಗಿ ರೇಷನ್ ಪಡೆದುಕೊಳ್ಳುವ ಸಲುವಾಗಿ ರೇಷನ್ ಕಾರ್ಡ್ ವಿತರಣೆ ಮಾಡಲಾಗುತ್ತದೆ. ರೇಷನ್ ಕಾರ್ಡ್ ಇದ್ದರೆ ಅದರಿಂದ ಸರಕಾರದ ಹಲವು ಯೋಜನೆಗಳ ಮೂಲಕ ಮೂಲಭೂತ ಸೌಲಭ್ಯಗಳನ್ನು ಕೂಡ ಪಡೆದುಕೊಳ್ಳಲು ಸಾಧ್ಯವಿದೆ.

ಈ ಸುದ್ದಿ ಓದಿ:- ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ಬಿಗ್‌ ಶಾ-ಕ್.! ಈ ಲಿಸ್ಟ್ ನಲ್ಲಿ ಇರುವ 26,000 ಮಹಿಳೆಯರಿಗೆ ಸಿಗೋದಿಲ್ಲ 2000.!

ಬಡವರ ಹಸಿವನ್ನು ನೀಗಿಸುವ ಸಲುವಾಗಿ, ಸರ್ಕಾರದಿಂದ ಸಿಗುವ ಪಡಿತರ ಪಡೆದುಕೊಳ್ಳಲು ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುವ ಗುರುತಿನ ಚೀಟಿ ಆಗಿರುತ್ತದೆ. ಇರುವ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ (Ration Card Correction) ಮಾಡಿಕೊಳ್ಳುವುದು ಕೂಡ ಬಹಳ ಮುಖ್ಯವಾಗಿರುತ್ತದೆ.

ಎಷ್ಟೋ ಬಾರಿ ನಾವಿರುವ ಸ್ಥಳದಿಂದ ಸ್ಥಳಾಂತರಗೊಂಡಿರುತ್ತೇವೆ. ಅಂತಹ ಸಮಯದಲ್ಲಿ ರೇಷನ್ ಕಾರ್ಡ್ ನಲ್ಲಿ ವಿಳಾಸ ಬದಲಾಯಿಸುವುದು (address change) ಬಹಳ ಮುಖ್ಯ, ಇಲ್ಲವಾದರೆ ನಿಮ್ಮ ಬ್ಯಾಂಕ್ ಖಾತೆಯೊಂದಿಗೆ (Bank Account) ವಿಳಾಸ ಮ್ಯಾಚ್ ಆಗದೆ ಇದ್ದಲ್ಲಿ ಗ್ಯಾರಂಟಿ ಯೋಜನೆಯ ಪ್ರಯೋಜನವೂ ಕೂಡ ಸಿಗುವುದಿಲ್ಲ ಎಂಬುದನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ.

ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ!

ಕಳೆದ ಎರಡುವರೆ ವರ್ಷಗಳಿಂದ ಅರ್ಜಿ ಸಲ್ಲಿಸಿದ ಸಾಕಷ್ಟು ಜನರಿಗೆ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಈಗಾಗಲೇ ಬೇರೆ ಬೇರೆ ಕಾರ್ಯಕ್ರಮದ ಸಂದರ್ಭದಲ್ಲಿ, ಆಹಾರ ಇಲಾಖೆಗೆ ಸಂಬಂಧಪಟ್ಟ ಅಧಿಕಾರಿಗಳು ಸದ್ಯದಲ್ಲಿಯೇ ಹೊಸ ರೇಷನ್ ಕಾರ್ಡ್ ವಿತರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ.

ಈ ಸುದ್ದಿ ಓದಿ:- ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಕ್ಕಾಗಿ ಕೂಡಲೇ ಅರ್ಜಿ ಸಲ್ಲಿಸಿ.

ಇನ್ನು ರೇಷನ್ ಕಾರ್ಡ್ ಹೊಂದಿರುವವರು ತಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರನ್ನು ಕೂಡ ರೇಷನ್ ಕಾರ್ಡ್ ನಲ್ಲಿ ಸೇರಿಸಬೇಕು. ಒಂದು ವೇಳೆ ನಿಮ್ಮ ಮನೆಗೆ ಮದುವೆಯಾಗಿ ಸೊಸೆ ಬಂದಿದ್ದರೆ ಅಥವಾ ಮನೆಯಲ್ಲಿ ಮಗುವಿನ ಜನನ ಆಗಿದ್ದರೆ ಅವರುಗಳ ಹೆಸರನ್ನು ಹೆಸರನ್ನು ನಿಮ್ಮ ರೇಷನ್ ಕಾರ್ಡ್ ನಲ್ಲಿ ಸೇರಿಸಿಕೊಳ್ಳಬೇಕು.

ಇದರಿಂದ ಕುಟುಂಬದ ಎಲ್ಲಾ ಸದಸ್ಯರು ಕೂಡ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬಹುದಾಗಿದೆ. ಈ ಹಿಂದೆ ನಾಲ್ಕು ಬಾರಿ ರೇಷನ್ ಕಾರ್ಡ್ ತಿದ್ದುಪಡಿಗೆ ಸರ್ಕಾರ ಅವಕಾಶ ನೀಡಿತ್ತು. ಆದರೆ ಸರ್ವರ್ ಸಮಸ್ಯೆಯಿಂದಾಗಿ ಸಾಕಷ್ಟು ಜನ ತಿದ್ದುಪಡಿ ಮಾಡಿಕೊಳ್ಳಲು, ರೇಷನ್ ಕಾರ್ಡ್ ನಲ್ಲಿ ಹೊಸ ಹೆಸರು ಸೇರ್ಪಡೆ ಮಾಡಲು ಸಾಧ್ಯವಾಗಿಲ್ಲ.

ಈ ಸುದ್ದಿ ಓದಿ:- ರಾಜ್ಯ ಸರ್ಕಾರದ ಹೊಸ ಯೋಜನೆ ಕೇವಲ ಒಂದು ಲಕ್ಷಕ್ಕೆ ಮನೆ ನಿರ್ಮಾಣ.

ಇದೇ ಕಾರಣಕ್ಕೆ ಈಗ ಮತ್ತೆ ಗ್ರಾಮ ಒನ್, ಕರ್ನಾಟಕ ಒನ್ ಮೊದಲಾದ ಸೇವಾಕೇಂದ್ರಗಳಲ್ಲಿ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಇದೆ. ಅಷ್ಟೇ ಅಲ್ಲದೆ ಆನ್ಲೈನ್ ಮೂಲಕವೂ ಕೂಡ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ರೇಷನ್ ಕಾರ್ಡ್ ನಲ್ಲಿ ಈ ತಿದ್ದುಪಡಿ ಮಾಡಬಹುದು!

* ಹೊಸ ಸದಸ್ಯರ ಸೇರ್ಪಡೆ (ಜನನ ಪ್ರಮಾಣ ಪತ್ರ (birth certificate) ಸಲ್ಲಿಸಿ)
* ಮರಣ ಹೊಂದಿದ ಸದಸ್ಯರ ಹೆಸರು ತೆಗೆದು ಹಾಕುವುದು (ಜನನ ಪ್ರಮಾಣ ಪತ್ರ (death certificate) ಸಲ್ಲಿಸಿ)
* ಪ್ರಸ್ತುತ ವಾಸವಿರುವ ವಿಳಾಸ ಬದಲಾವಣೆ (ವಿಳಾಸ ಪುರಾವೆಯಾಗಿ ವಿದ್ಯುತ್ ಬಿಲ್, ರೆಂಟ್ ಅಗ್ರಿಮೆಂಟ್ ಮೊದಲಾದವುಗಳನ್ನು ಸಲ್ಲಿಸಬಹುದು)

* ಇವುಗಳ ಜೊತೆಗೆ ಅರ್ಜಿ ಸಲ್ಲಿಸಲು ಸದಸ್ಯರು ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕೂಡ ಹೊಂದಿರಬೇಕು. ಈ ದಾಖಲೆಗಳು ನಿಮ್ಮ ಬಳಿ ಇದ್ದರೆ ಹತ್ತಿರದ ಸೇವಾ ಕೇಂದ್ರಕ್ಕೆ ಹೋಗಿ ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಅರ್ಜಿ ಸಲ್ಲಿಸಬಹುದು.
* ನಿಮ್ಮ ಅರ್ಜಿ ಸ್ವೀಕಾರ ಗೊಂಡಿದ್ದಕ್ಕೆ ಸ್ವೀಕೃತಿ ಪ್ರತಿ ನೀಡುತ್ತಾರೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ. ಅರ್ಜಿ ಸ್ವೀಕಾರಗೊಂಡ ಕೆಲವೇ ದಿನಗಳಲ್ಲಿ ರೇಷನ್ ಕಾರ್ಡ್ ನಲ್ಲಿ ತಿದ್ದುಪಡಿ ಪೂರ್ಣಗೊಳ್ಳುತ್ತದೆ.

ವಿಳಾಸ ಬದಲಾಯಿಸುವುದಿದ್ದರೆ ಹೀಗೆ ಮಾಡಿ :-

* ಕುಟುಂಬ ಯಜಮಾನನ ರೇಷನ್ ಕಾರ್ಡ್
* ಆಧಾರ್ ಕಾರ್ಡ್
* ವಿಳಾಸದ ಪುರಾವೆ (ಮನೆ ಅಗ್ರಿಮೆಂಟ್, ಕರೆಂಟ್ ಬಿಲ್ etc)
ಮೃತಪಟ್ಟವರ ಹೆಸರು ತೆಗೆಯುವುದಿದ್ದರೆ – ಮರಣ ಪ್ರಮಾಣ ಪತ್ರ (death certificate) ಅಗತ್ಯವಾಗಿರುತ್ತದೆ.

ಅರ್ಜಿ ಸ್ಟೇಟಸ್ ಚೆಕ್ ಮಾಡಬಹುದು ಹೇಗೆ :-

ನೀವು ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಿದ ನಂತರ ಒಂದು ಸ್ವೀಕೃತಿ ನಂಬರ್ ಅಥವಾ ಪ್ರತಿ ಕೊಡುತ್ತಾರೆ. ಅದನ್ನು ಪಡೆದುಕೊಳ್ಳಿ. ಬಳಿಕ ಆನ್ಲೈನ್ ನಲ್ಲಿ ನೀವು ಸ್ಟೇಟಸ್ ಚೆಕ್ ಮಾಡಬಹುದು.

ಆನ್ಲೈನ್ ನಲ್ಲಿ ಸ್ಟೇಟಸ್ ಚೆಕ್ ಮಾಡಲು :-

https://ahara.kar.nic.in/Home/EServices ಆಹಾರ ಇಲಾಖೆಯ ಈ ವೆಬ್ಸೈಟ್ ಮೇಲೆ ಕ್ಲಿಕ್ ಮಾಡಿ. ಎಡ ಭಾಗದಲ್ಲಿ ಕಾಣಿಸುವ ಮೂರು ಲೈನ್ಗಳ ಮೇಲೆ ಕ್ಲಿಕ್ ಮಾಡಿ. ಮುಂದಿನ ಹಂತದಲ್ಲಿ ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ. ತಿದ್ದುಪಡಿ ವಿನಂತಿ ಸ್ಥಿತಿ ಎನ್ನುವ ಆಯ್ಕೆ ಇರುತ್ತದೆ. ಅದನ್ನು ಟ್ಯಾಪ್ ಮಾಡಿ. ಇದಕ್ಕಾಗಿ ನೀವು ನಿಮ್ಮ ಬಳಿ ಅರ್ಜಿ ಸಲ್ಲಿಸಿದ ನಂತರ ಕೊಡಲಾಗುವ ಸ್ವೀಕೃತಿ ಪ್ರತಿಯನ್ನು ಇಟ್ಟುಕೊಂಡಿರಬೇಕು.

ಈ ಮೇಲೆ ತಿಳಿಸಿದಂತಹ ಎಲ್ಲಾ ದಾಖಲೆಗಳು ನಿಮ್ಮ ಬಳಿ ಪಕ್ಕ ಇದ್ದಲ್ಲಿ ‌ನಿಮ್ಮ ರೇಷನ್ ಕಾರ್ಡ್‌ನಲ್ಲಿ ಹೊಸ ಹೆಸರು ಸೇರ್ಪಡೆ ಹಾಗೂ ತಿದ್ದುಪಡಿ ಸಾಧ್ಯವಾಗಲಿದೆ.