ಆರ್ಥಿಕ ಮುಗ್ಗಟ್ಟು ಹೆಚ್ಚಾದಂತೆ ದೇಶದಲ್ಲಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಜನರು ನಿತ್ಯದ ಜೀವನ ನಿರ್ವಹಣೆ ವಸ್ತುಗಳನ್ನು ಖರೀದಿಸಲು ಹೆಚ್ಚಿನ ಹಣ ನೀಡುವ ಪರಿಸ್ಥಿತಿ ಎದುರಾಗುತ್ತಿದೆ. ಇನ್ನು ಕೇಂದ್ರ ಸರ್ಕಾರ ಬೆಲೆ ಏರಿಕೆಗೆ ಪರಿಣಾಮವನ್ನು ಕಡಿಮೆ ಮಾಡಲು ಆಗಾಗ ಕೆಲವು ಪರಿಹಾರವನ್ನು ನೀಡುತ್ತಿರುತ್ತದೆ.
ಇದೀಗ ದೇಶದಲ್ಲಿ ಅಕ್ಕಿಯ ಬೆಲೆಯಂತು ಗಗನಕ್ಕೇರಿದೆ. ಸದ್ಯ ಬೆಲೆ ನಿಯಂತ್ರಣದ ಪ್ರಯತ್ನದಲ್ಲಿರುವ ಸರ್ಕಾರ ಇದೀಗ ಹೊಸ ಹೆಜ್ಜೆ ಇಟ್ಟಿದೆ. ಸಾಮಾನ್ಯ ಜನರಿಗೆ ಪರಿಹಾರ ನೀಡಲು ಮತ್ತು ಚಿಲ್ಲರೆ ಹಣದುಬ್ಬರವನ್ನು ಕಡಿಮೆ ಮಾಡಲು ಸರ್ಕಾರವು ಅಕ್ಕಿಯನ್ನು ಅಗ್ಗದ ದರದಲ್ಲಿ ಮಾರಾಟ ಮಾಡಲು ಮುಂದಾಗಿದೆ.
ಸರ್ಕಾರದ ಯೋಜನೆಯ ಅಡಿಯಲ್ಲಿ ಚಿಲ್ಲರೆ ಮಾರುಕಟ್ಟೆಯಲ್ಲಿ ಮುಂದಿನ ವಾರದಿಂದ ಕೆ.ಜಿಗೆ 29 ರೂ.ಯಂತೆ ‘ಭಾರತ್ ರೈಸ್’ (Bharat Rice) ಮಾರಾಟ ಆರಂಭವಾಗಲಿದೆ. ಇದಕ್ಕಾಗಿ ಅಕ್ಕಿ ದಾಸ್ತಾನುಗಳನ್ನು ಬಹಿರಂಗಪಡಿಸುವಂತೆ ವರ್ತಕರಿಗೂ ತಿಳಿಸಲಾಗಿದೆ.
ಈ ಸುದ್ದಿ ಓದಿ:- ಸೀಬೆ ಬೆಳೆಯಿರಿ, ಎಕರೆಗೆ 30 ಲಕ್ಷ ಲಾಭ ಪಡೆಯಿರಿ.!
ಮಾರುಕಟ್ಟೆಯಲ್ಲಿ ಏರುತ್ತಿರುವ ಬೆಲೆಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ವಿವಿಧ ಬಗೆಯ ಅಕ್ಕಿಗಳ ರಫ್ತು ನಿಷೇಧದ ಹೊರತಾಗಿಯೂ, ಕಳೆದ ಒಂದು ವರ್ಷದಲ್ಲಿ ಅಕ್ಕಿಯ ಚಿಲ್ಲರೆ ಮತ್ತು ಸಗಟು ದರಗಳು ಸುಮಾರು 15 ಪ್ರತಿಶತದಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಹೇಳಿದ್ದಾರೆ.
ಹೌದು, ಸದ್ಯ ಕೇಂದ್ರ ಸರ್ಕಾರದಿಂದ ಇದೊಂದು ಜನಸಮಾನ್ಯರಿಗೆ ಗುಡ್ ನ್ಯೂಸ್ ಅಂತಾನೇ ಹೇಳ್ಬೋದು. ಮುಂದಿನ ವಾರದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿದೆ. ಜನಸಾಮಾನ್ಯರಿಗೆ ಭಾರತ್ ರೈಸ್ ಕೊಂಚ ಅಗ್ಗದ ದರದಲ್ಲಿ ಲಭ್ಯವಾಗಲಿದೆ.
ಅಕ್ಕಿ ರಫ್ತಿನ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಲಾಗುವುದು ಎಂಬ ಸುದ್ದಿಗೆ ಚೋಪ್ರಾ ಪ್ರತಿಕ್ರಿಯಿಸಿದ್ದಾರೆ. ದರ ನಿಯಂತ್ರಣಕ್ಕೆ ಬರುವವರೆಗೂ ನಿಷೇಧಾಜ್ಞೆ ಮುಂದುವರಿಯಲಿದೆ. ಅಲ್ಲದೆ, ಪ್ರತಿ ಶುಕ್ರವಾರ ಸಚಿವಾಲಯದ ವೆಬ್ಸೈಟ್ನಲ್ಲಿ ದಾಸ್ತಾನು ವಿವರಗಳನ್ನು ಸೇರಿಸಲು ಚಿಲ್ಲರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು ಮತ್ತು ಪ್ರೊಸೆಸರ್ಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಈ ಸುದ್ದಿ ಓದಿ:- ಜಮೀನು ಹೊಂದಿರುವವರಿಗೆ ಗುಡ್ ನ್ಯೂಸ್ ಇನ್ಮುಂದೆ ಭೂ ದಾಖಲೆಗಳಿಗಾಗಿ ಅಲೆದಾಡುವ ಅವಶ್ಯಕತೆ ಇಲ್ಲ.! ರೈತರಿಗಾಗಿ ಹೊಸ ಸೇವೆ ಆರಂಭ.!
ಅಕ್ಕಿ ಮಾರಾಟದ ಮೇಲೆ ಮಿತಿ ಇದೆಯೇ? ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಅಗತ್ಯ ಬಿದ್ದರೆ ಯಾವುದೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ. ದೇಶದಲ್ಲಿ ಅಕ್ಕಿ ಹೊರತುಪಡಿಸಿ ಎಲ್ಲ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣದಲ್ಲಿದೆ ಎಂದರು.
29 ರೂ.ಗೆ ಸಿಗಲಿದೆ ಭಾರತ್ ರೈಸ್
ಮುಂದಿನ ವಾರದಿಂದ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಅನ್ನು ಕೇವಲ ರೂ. 29 ಕ್ಕೆ ಮಾರಾಟ ಮಾಡಲಾಗುತ್ತದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಹೊರಡಿಸಿದೆ. ಬೆಲೆಯನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಅಕ್ಕಿ ದಾಸ್ತಾನು ಬಹಿರಂಗಪಡಿಸುವಂತೆ ಸರ್ಕಾರವು ಅಕ್ಕಿ ವ್ಯಾಪಾರಿಗಳಿಗೆ ನಿರ್ದೇಶನ ನೀಡಿದೆ.
ಭಾರತ್ ರೈಸ್ ಎಲ್ಲಿ ಖರೀದಿಸಬಹುದು..?
ಭಾರತ್ ರೈಸ್ ಎರಡು ಸಹಕಾರಿ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ನ್ಯಾಷನಲ್ ಕೋ ಆಪರೇಟಿವ್ ಕನ್ಸ್ಯುಮಾರ್ ಫೆಡರೇಷನ್ ಆಫ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳಲ್ಲಿ ಲಭ್ಯವಿರುತ್ತದೆ. ಇಲ್ಲಿ ನೀವು ಭಾರತ್ ರೈಸ್ ಅನ್ನು ಕೇವಲ 29 ರೂ. ಗೆ ಖರೀದಿಸಬಹುದು.
5 ಮತ್ತು 10 ಕೆಜಿ ಪ್ಯಾಕೆಟ್ಗಳಲ್ಲಿ ದೊರೆಯಲಿದೆ ಅಕ್ಕಿ
ಬೆಲೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರೀಯ ಮಳಿಗೆಗಳ ಮೂಲಕ ಅಕ್ಕಿಯನ್ನು ಚಿಲ್ಲರೆ ಮಾರಾಟ ಮಾಡಲು ಸರ್ಕಾರ ನಿರ್ಧರಿಸಿದೆ. ಇದರ ಅಡಿಯಲ್ಲಿ ಪ್ರತಿ ಕೆಜಿಗೆ 29 ರೂ.ನಂತೆ ‘ಭಾರತ್ ರೈಸ್’ ಮಾರಾಟ ಮಾಡಲು ನಿರ್ಧರಿಸಲಾಗಿದೆ. ಇ-ಕಾಮರ್ಸ್ ಪ್ಲಾಟ್ಫಾರರ್ಮ್ಗಳಾದ ಅಮೆಜಾನ್, ಫ್ಲಿಪ್ಕಾರ್ಟ್ ಮುಂತಾವುಗಳಲ್ಲಿದ ‘ಭಾರತ್ ರೈಸ್’ ಅನ್ನು ಮಾರಾಟ ಮಾಡುತ್ತದೆ.
ಮುಂದಿನ ವಾರದಿಂದ 5 ಕೆಜಿ ಹಾಗೂ 10 ಕೆಜಿ ಪ್ಯಾಕೆಟ್ ನಲ್ಲಿ Bharat Rice ದೊರೆಯಲಿದೆ ಎಂದು ಸಂಜೀವ್ ಚೋಪ್ರಾ ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಸರ್ಕಾರವು ಐದು ಲಕ್ಷ ಟನ್ ಅಕ್ಕಿಯನ್ನು ಚಿಲ್ಲರೆ ಮಾರುಕಟ್ಟೆಯಲ್ಲಿ ಮಾರಾಟಕ್ಕೆ ನಿಗದಿಪಡಿಸಿದೆ.
ಈ ಸುದ್ದಿ ಓದಿ:- ನಿಮ್ಮ ಡ್ರೈವಿಂಗ್ ಲೈಸೆನ್ಸ್ ಕಳೆದೋಗಿದ್ರೆ ಚಿಂತಿಸ್ಬೇಡಿ.!… ನಕಲಿ ಲೈಸೆನ್ಸ್ ಪಡೆಯಲು ನಿಮ್ಮ ಮೊಬೈಲ್ ನಲ್ಲೇ ಈ ರೀತಿ ಅರ್ಜಿ ಸಲ್ಲಿಸಿ ಸಾಕು.!
ಆನ್ಲೈನ್ ವೇದಿಕೆಗಳಲ್ಲದೆ ಎನ್ಎಎಫ್ಇಡಿ (ನಾಫೆಡ್), ಎನ್ಸಿಸಿಎಫ್, ಕೇಂದ್ರೀಯ ಭಂಡಾರಗಳಲ್ಲಿ ಅಕ್ಕಿ ಮಾರಾಟಕ್ಕೆ ಲಭ್ಯವಿದೆ. ಇದೇ ವೇಳೆ ಅಕ್ಕಿ ದರ ನಿಯಂತ್ರಣಕ್ಕೆ ಬರುವವರೆಗೂ ಅಕ್ಕಿ ರಫ್ತಿಗೆ ಹೇರಲಾಗಿರುವ ನಿರ್ಬಂಧವನ್ನು ಸಡಿಲಿಸುವ ಪ್ರಶ್ನೆಯೇ ಇಲ್ಲ ಎಂದು ಸಂಜೀವ್ ಚೋಪ್ರಾ ಸ್ಪಷ್ಟಪಡಿಸಿದ್ದಾರೆ.
ಈ ಆಹಾರ ಪದಾರ್ಥಗಳ ಬೆಲೆಯಲ್ಲಿಯೂ ಇಳಿಕೆ
ಹಣದುಬ್ಬರಕ್ಕೆ ಕಡಿವಾಣ ಹಾಕಲು ಈಗಾಗಲೇ ‘ಭಾರತ್ ಅಟ್ಟ’ ಅಂದರೆ ಗೋಧಿ ಹಿಟ್ಟನ್ನು ಕೆ.ಜಿಗೆ 27.50 ರೂ. ಯಂತೆ, ‘ಭಾರತ್ ದಾಲ್’ ಅನ್ನು ಕೆ.ಜಿಗೆ 60 ರೂ. ಯಂತೆ ಮಾರಾಟ ಮಾಡಲಾಗುತ್ತಿದೆ. ಅಕ್ಕಿ ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕುವ ಯಾವುದೇ ಯೋಜನೆ ಇನ್ನೂ ಇಲ್ಲ ಎಂದು ಸರ್ಕಾರ ಹೇಳಿದೆ.
ಅಕ್ಕಿ ರಫ್ತಿನ ಮೇಲಿನ ನಿಷೇಧವನ್ನು ಹಿಂಪಡೆಯಲಾಗುತ್ತಿದೆ ಎನ್ನುವುದು ಕೇವಲ ವದಂತಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹೊಸ ದರದ ಅಕ್ಕಿ ದಾಸ್ತಾನು ಬಗ್ಗೆ ಮಾಹಿತಿ ನೀಡುವಂತೆ ಚಿಲ್ಲರೆ ವ್ಯಾಪಾರಿಗಳು ಮತ್ತು ಸಗಟು ವ್ಯಾಪಾರಿಗಳು ಮತ್ತು ಆಹಾರ ಸಂಸ್ಕರಣೆದಾರರಿಗೆ ತಿಳಿಸಲಾಗಿದೆ ಎಂದು ಚೋಪ್ರಾ ಹೇಳಿದ್ದಾರೆ.
ಈ ಸುದ್ದಿ ಓದಿ:- ಪಡಿತರ ಫಲಾನುಭವಿಗಳಿಗೆ ಬಿಗ್ ಶಾಕ್: ರಾಜ್ಯದಲ್ಲಿ 5 ಲಕ್ಷ ಬಿಪಿಎಲ್ ರೇಷನ್ ಕಾರ್ಡುಗಳು ರದ್ದು.! ನಿಮ್ಮ ಹೆಸರು ಈ ಲಿಸ್ಟ್ ನಲ್ಲಿ ಇದಿಯೇ ನೋಡಿ.!
ಅಕ್ಕಿ ಸಂಗ್ರಹಣೆಗೆ ಸರ್ಕಾರ ಮಿತಿಯನ್ನು ನಿಗದಿಪಡಿಸುವ ಪ್ರಶ್ನೆಗೆ ಉತರಿಸಿದ ಚೋಪ್ರಾ, ಬೆಲೆಗಳನ್ನು ಕಡಿಮೆ ಮಾಡಲು ‘ಎಲ್ಲಾ ಆಯ್ಕೆಗಳು ಮುಕ್ತವಾಗಿವೆ’ ಎಂದು ಹೇಳಿದರು. ಅಕ್ಕಿ ಹೊರತುಪಡಿಸಿ ಎಲ್ಲಾ ಅಗತ್ಯ ಆಹಾರ ಪದಾರ್ಥಗಳ ಬೆಲೆ ನಿಯಂತ್ರಣದಲ್ಲಿದೆ ಎಂದು ಕಾರ್ಯದರ್ಶಿ ತಿಳಿಸಿದರು. ಮುಂಬರುವ ದಿನಗಳಲ್ಲಿ ಭಾರತ್ ದಾಲ್ನಂತೆ ಭಾರತ್ ರೈಸ್ ಸಹ ಸಹಕಾರಿ ಮಳಿಗೆಗಳು ಮತ್ತು ದೊಡ್ಡ ರಿಟೇಲ್ ಚೈನ್ ನಲ್ಲಿ ಮಾರಾಟವಾಗುವ ನಿರೀಕ್ಷೆಯಿದೆ.
ಭಾರತದಿಂದ ಅಕ್ಕಿ ಆಮದು ಪ್ರಮಾಣ
ಮಲೇಷ್ಯಾ – 29%
ಶ್ರೀಲಂಕಾ – 23%
ಇಂಡೋನೇಷ್ಯಾ – 20%
ಯುಎಇ – 16%
ಸೌದಿ ಅರೇಬಿಯಾ 12%
ಭಾರತದಿಂದ ಅಕ್ಕಿ ರಫ್ತು ಪ್ರಮಾಣ
ಅಮೆರಿಕ – 21 ಲಕ್ಷ ಟನ್
ಪಾಕಿಸ್ತಾನ – 36 ಲಕ್ಷ ಟನ್
ವಿಯೆಟ್ನಾಂ – 75 ಲಕ್ಷ ಟನ್
ಭಾರತ – 2.25 ಕೋಟಿ ಟನ್
ಇತರೆ – 1.14 ಕೋಟಿ ಟನ್