ನಮ್ಮ ಸಂಸ್ಕೃತಿಯಲ್ಲಿ ದೇವರಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ ದೇವರ ಪೂಜೆಯ ಸಮಯದಲ್ಲಿ ಕಳಶವನ್ನು ಇರಿಸಿ ಲಕ್ಷ್ಮಿ ದೇವಿಯನ್ನು ಆಹ್ವಾನಿಸಿ ಪೂಜೆಯನ್ನು ಸಲ್ಲಿಸಲಾಗುತ್ತದೆ ಅಂತಹ ಕಳಶವನ್ನು ಇಡುವಾಗ ತುಂಬಾ ಎಚ್ಚರಿಕೆಯಿಂದ ಜಾಗರೂಕರಾಗಿ ಕಳಶವನ್ನು ಇಟ್ಟು ಪೂಜೆಯನ್ನು ಸಲ್ಲಿಸಬೇಕು.
ಕಳಶ ಇಟ್ಟು ಪೂಜೆ ಮಾಡುವಾಗ ಅನುಸರಿಸಬೇಕಾದ ಮುಖ್ಯ ಸಂಗತಿಗಳು.
1. ಕಳಸಕ್ಕೆ ಯಾವುದೇ ಕಾರಣಕ್ಕೂ ಸ್ಟೀಲ್ ಅಥವಾ ಕೋಟಿಂಗ್ ಕಳಸದ ಚೊಂಬನ್ನು ಬಳಸಬಾರದು
2. ಕಳಶಕ್ಕೆ ಬೆಳ್ಳಿ ಹಿತ್ತಾಳೆ ತಾಮ್ರದ ಚೊಂಬುಗಳನ್ನು ಬಳಸುವುದು ಬಹಳ ಶ್ರೇಷ್ಠವಾಗಿದ್ದು ನೀವು ಕಳಶವನ್ನು ಇರಿಸುವಾಗ ಈ ಲೋಹದ ಚೊಂಬುಗಳನ್ನು ಇಟ್ಟು ಪೂಜೆ ಸಲ್ಲಿಸಿ.
3. ನಿಮ್ಮ ಹಿರಿಯರು ಯಾವ ರೀತಿ ಕಳಸವನ್ನು ಸ್ಥಾಪನೆ ಮಾಡಿ ಪೂಜೆ ಮಾಡುತ್ತಾರೋ ಅದೇ ರೀತಿ ನೀವು ಸಹ ಪಾಲಿಸುವುದು ತುಂಬಾ ಉತ್ತಮ.
ನಾವು ತುಂಬಾ ಜನರನ್ನು ನೋಡಿರುವ ಹಾಗೆ ಕೆಲವರು ಲಕ್ಷ್ಮಿ ಕಳಸವನ್ನು ಇಟ್ಟರೆ ಇನ್ನೂ ಕೆಲವರು ಮನೆ ದೇವರ ಕಳಸವನ್ನು ಇಟ್ಟು ಪೂಜೆ ಮಾಡುತ್ತಾರೆ ಕೆಲವರು ಕಾಯಿ ಕಳಶ ಇಡುತ್ತಾರೆ ಹಾಗೆ ಇನ್ನು ಕೆಲವರು ಎಲೆ ಕಳಶವನ್ನು ಇರಿಸುತ್ತಾರೆ ಯಾವುದೇ ಕಳಶಸವನ್ನು ಇಟ್ಟರೂ ಸಹ ನಿಯಮದಂತೆ ಪೂಜೆ ಮಾಡಿ ದೇವರನ್ನು ಸಂತೃಪ್ತರನ್ನಾಗಿ ಮಾಡುವುದು ತುಂಬಾ ಉತ್ತಮ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಅಡಿಯಲ್ಲಿ 3 ಲಕ್ಷ ರೂಪಾಯಿ ಹಣ ಪಡೆಯಲು ಈ ಪ್ರಮುಖ ಕೆಲಸವನ್ನು ಮಾಡಲೇಬೇಕು.?
ಒಂದು ವೇಳೆ ನೀವು ಲಕ್ಷ್ಮಿ ಕಳಶವನ್ನು ಇಟ್ಟು ಪೂಜೆ ಸಲ್ಲಿಸುವುದಾದರೆ ನೀವು ಕಳಶಕ್ಕೆ ಮಾಂಗಲ್ಯ ಹಾಕಬೇಕು ಮಾಂಗಲ್ಯ ಇಲ್ಲದೆ ಇದ್ದರೆ ಅರಿಶಿಣದ ಕೊಂಬನ್ನಾದರೂ ಸಹ ಕಟ್ಟಬೇಕು ಇದು ದೇವರಿಗೆ ಮುಖ್ಯವಾದ ಸೌಭಾಗ್ಯ.
4. ಕಳಶವನ್ನು ಯಾವುದೇ ಕಾರಣಕ್ಕೂ ನೆಲದ ಮೇಲೆ ಇಡಬಾರದು ಒಂದು ತಟ್ಟೆಗೆ ಮೂರು ಅಳತೆ ಹಿಡಿ ಅಥವಾ ಐದು ಅಳತೆ ಹಿಡಿ ಅಕ್ಕಿಯನ್ನು ಹಾಕಿ ಅದಕ್ಕೆ ಅರಿಶಿಣ, ಕುಂಕುಮ ಹಾಕಿ ಉಂಗುರದ ಬೆರಳಿನಿಂದ ಅಷ್ಟದಳದ ಕಮಲವನ್ನು ಬಿಡಿಸಿ ಅದರ ಮೇಲೆ ಇಡಬೇಕು.
5. ಕಳಶಕ್ಕೆ ಶುದ್ಧವಾದ ಚೊಂಬನ್ನು ತೆಗೆದುಕೊಂಡು ನಂತರ ಅದಕ್ಕೆ ಅರಿಶಿಣ, ಕುಂಕುಮ, ಗಂಧವನ್ನು ಹಚ್ಚಿ ಶುದ್ಧವಾದ ನೀರು ಹಾಕಿ ನಂತರ ಅದಕ್ಕೆ ಒಂದು ಚಿಟಿಕೆ ಅರಿಶಿಣ ಕುಂಕುಮ ಹಾಕಿ ಸ್ವಲ್ಪ ಮಂತ್ರಾಕ್ಷತೆ ಹಾಕಿ ಒಂದು ಹೂವು ಹಾಗೂ ಒಂದು ನಾಣ್ಯ ಯಾವುದಾದರೂ ಸರಿ ಹಿತ್ತಾಳೆ ಬೆಳ್ಳಿ ಅಥವಾ ನಾರ್ಮಲ್ ನಾಣ್ಯ ಯಾವುದಾದರೂ ಒಂದು ನಾಣ್ಯವನ್ನು ತಪ್ಪದೇ ಹಾಕಿ ಇದು ಪ್ರಾಣದ ಪ್ರತೀಕ.
ಯಾವಾಗಲೂ ಕಳಶಕ್ಕೆ ಹಾಕುವ ನೀರು ತೆಂಗಿನಕಾಯಿಗೆ ತಾಗುವ ಹಾಗೆ ಇರಬೇಕು ಆದರೆ ಚೊಂಬಿನಿಂದ ಚೆಲ್ಲುವಂತೆ ಇರಬಾರದು ಸಾಕಷ್ಟು ಜನರು ಕವಡೆ ಗೋಮತಿ ಚಕ್ರ ಕಮಲದ ಬೀಜಗಳನ್ನು ಹಾಕುವುದು ಇದೆ ಆದರೆ ಇದು ನಿಮ್ಮ ಅನುಕೂಲಕ್ಕೆ ಬಿಟ್ಟಿದ್ದು ಹಬ್ಬ ಹರಿದಿನಗಳಲ್ಲಿ ಹಾಕಿದರೆ ಸಾಕು.
6. ಕಳಶಕ್ಕೆ ಇಡುವ ತೆಂಗಿನಕಾಯಿಯನ್ನು ಹಾರಿಸುವಾಗ ಹಾಳಾಗದ ಅಥವಾ ಒಳ್ಳೆಯ ತೆಂಗಿನಕಾಯಿಯನ್ನು ನೀವು ಆರಿಸಿ ತೆಗೆದುಕೊಳ್ಳಬೇಕು ಜೊತೆಗೆ ಜುಟ್ಟು ಇರುವ ತೆಂಗಿನಕಾಯಿಯನ್ನು ಇಡಬೇಕು ಕಣ್ಣು ಕಾಣಿಸದ ತೆಂಗಿನಕಾಯಿ ಇಡುವುದು ಬಹಳ ಮುಖ್ಯ.
7. ಕಳಶಕ್ಕೆ ವೀಳ್ಯದೆಲೆ ಅಥವಾ ಮಾವಿನ ಎಲೆ ಯಾವುದಾದರೂ ಎಲೆಯನ್ನು ಇಡಬಹುದು ಆದರೆ ಎಲೆ ಹರಿದಿರಬಾರದು ತೂತಾಗಿರಬಾರದು ಹಾಗೆಯೇ ಎಲೆಗಳು ಒಂದೇ ಅಳತೆಯಲ್ಲಿ ಇಡುವುದು ಬಹಳ ಮುಖ್ಯ.
8. ಮನೆಯಲ್ಲಿ ಯಾವುದೇ ಕಾರಣಕ್ಕೂ ಸಹ ಮಂಗಳವಾರ, ಶುಕ್ರವಾರ, ಅಮಾವಾಸ್ಯೆ, ಪೊರ್ಣಮಿ ದಿನಗಳಲ್ಲಿ ಕಳಶವನ್ನು ಕದಲಿಸಬಾರದು ಈ ಒಂದು ವಿಷಯವನ್ನು ನೀವು ಗಮನದಲ್ಲಿ ಇಟ್ಟುಕೊಂಡು ಕಳಶವನ್ನು ತೆಗೆಯಬೇಕು. ಈ ದಿನಗಳಲ್ಲಿ ಕಳಶವನ್ನು ಪ್ರತಿಷ್ಠಾಪನೆ ಮಾಡುವುದು ತುಂಬಾ ಒಳ್ಳೆಯದು. ಮಂಗಳವಾರ ಶುಕ್ರವಾರ ಅಮಾವಾಸ್ಯೆ ಪೊರ್ಣಮಿಯ ಹಿಂದಿನ ದಿನಗಳಲ್ಲಿ ನೀವು ಕಳಶವನ್ನು ಸ್ವಚ್ಛಗೊಳಿಸಿ.
9. ಕಳಶವನ್ನು ಕದಲಿಸುವಾಗ ಕಳಶವನ್ನು ಬಲಕ್ಕೆ ಮೂರು ಬಾರಿ ಸರಿಸಿ ನಂತರ ತೆಗೆಯುವುದು ಸೂಕ್ತ.
10. ಬಹಳ ಮುಖ್ಯವಾದ ವಿಷಯ ಏನೆಂದರೆ ಕಳಶ ಪ್ರತಿಷ್ಠಾಪನೆ ಮಾಡಿದ ನಂತರ ಯಾವುದೇ ಕಾರಣಕ್ಕೂ ಪದೇಪದೇ ಮುಟ್ಟುವುದು ಸರಿಪಡಿಸುವುದು ಮಾಡಲೇಬಾರದು. ಇದು ಎಚ್ಚರಿಕೆಯಿಂದ ನಿರ್ವಹಿಸಬೇಕಾದ ಕೆಲಸ.
ಕಳಶವನ್ನು ಕದಲಿಸಿದ ನಂತರ ಆ ನೀರನ್ನು ಯಾವುದಾದರೂ ತುಳಸಿ ಗಿಡ ಅಥವಾ ತೆಂಗಿನ ಮರಕ್ಕೆ ಹಾಕಬೇಕು ಯಾರು ತುಳಿಯದ ಜಾಗದಲ್ಲಿ ನೀವು ನೀರನ್ನು ಹಾಕುವುದು ತುಂಬಾ ಮುಖ್ಯವಾದಂತಹ ವಿಷಯ.
ಇಷ್ಟು ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ಮನೆಯಲ್ಲಿ ಕಳಶ ಪ್ರತಿಷ್ಠಾಪನೆಯನ್ನು ಮಾಡಬೇಕು ಈ ನಿಯಮವನ್ನು ನೀವು ಪಾಲಿಸಿದ್ದೆ ಆದಲ್ಲಿ ತಾಯಿ ಲಕ್ಷ್ಮಿ ದೇವಿ ನಿಮ್ಮ ಮನೆಯಲ್ಲಿ ಬಂದು ನೆಲೆಸುತ್ತಾಳೆ. ಸಾಕಷ್ಟು ಸಮೃದ್ಧಿ ಸಂಪತ್ತನ್ನು ನಿಮಗೆ ನೀಡುತ್ತಾಳೆ.