ಲೇಬರ್ ಕಾರ್ಡ್ (Labour card) ನೊಂದಣಿ ಪ್ರಕ್ರಿಯೆ ಆರಂಭವಾಗಿದ್ದು ಕೂಡಲೇ ಅರ್ಜಿ ಸಲ್ಲಿಸಿ.

ಕಟ್ಟಡ ಕಾರ್ಮಿಕರಿಗೆ ಸಂತಸದ ಸುದ್ದಿ ಇದೀಗ ಸರ್ಕಾರದಿಂದ ಅನೇಕ ಯೋಜನೆಗಳು ಜಾರಿಯಾಗುತ್ತಿವೆ. ಈ ಎಲ್ಲ ಯೋಜನೆಗಳಿಗಿಂದ ಮಹಿಳೆಯರಿಗೆ ಮತ್ತು ಬಡವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಹಿಂದುಳಿದಿರುವವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಬಹಳ ಉಪಯೋಗವಾಗುತ್ತಿದೆ ಇದರಿಂದ ಅವರು ಯಾರ ಸಹಾಯ ಇಲ್ಲದಿದ್ದರೂ ಸಹ ಜೀವನವನ್ನು ಸಾಗಿಸುವಂತಹ ಪರಿಸ್ಥಿತಿ ಏರ್ಪಟ್ಟಿದೆ.

WhatsApp Group Join Now
Telegram Group Join Now

ಇದೀಗ ಕಾರ್ಮಿಕ ಇಲಾಖೆಯಿಂದ ಹಲವಾರು ಯೋಜನೆಗಳು ಜಾರಿಯಾಗುತ್ತಿವೆ ಅವುಗಳನ್ನು ಪಡೆಯಲು ಕಾರ್ಮಿಕರು ಲೇಬರ್ ಕಾರ್ಡನ್ನು (Labour card) ಪಡೆದಿರಬೇಕು. ರಾಜ್ಯ ಸರ್ಕಾರ (state government) ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಮೂಲಕ ಅನೇಕ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ರೂಪಿಸುತ್ತಿದೆ ಇದಕ್ಕಾಗಿ ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಂಡಿರಬೇಕು.

ಬಿಪಿಎಲ್ (BPL) ರೇಷನ್ ಕಾರ್ಡ್ (Ration card) ಬಳಕೆದಾರರಿಗೆ ಸರ್ಕಾರದಿಂದ 5 ಹೊಸ ರೂಲ್ಸ್ 5/1/2024 ನಿಂದ ಜಾರಿಯಾಗಲಿದೆ.

ಕಾರ್ಮಿಕ ಇಲಾಖೆಯಿಂದ ದೊರೆಯುವಂತಹ ಈ ಯೋಜನೆಗಳು ಬಹಳಷ್ಟು ಜನರಿಗೆ ಉಪಯೋಗವಾಗುತ್ತದೆ ಹಾಗೆಯೇ ಸರ್ಕಾರದಿಂದ ದೊರೆಯುವ ಈ ಸೌಲಭ್ಯವನ್ನು ಪಡೆಯಲು ಕಾರ್ಮಿಕರು ಅಥವಾ ಅರ್ಹ ಅಭ್ಯರ್ಥಿಗಳು ಲೇಬರ್ ಕಾರ್ಡನ್ನು (labour card) ಹೊಂದಿರಬೇಕು. ಲೇಬರ್ ಕಾರ್ಡನ್ನು ಹೊಂದಿದ್ದರೆ ಮಾತ್ರ ಸರ್ಕಾರ ನೀಡುತ್ತಿರುವ ಈ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ ಹಾಗಾಗಿ ಲೇಬರ್ ಕಾರ್ಡ್ ದೊರೆಯಬೇಕಿದ್ದರೆ ಅಥವಾ ಈ ಯೋಜನೆಗಳನ್ನು ಪಡೆಯಲು ಕಾರ್ಮಿಕರು ನೋಂದಣಿ ಕಡ್ಡಾಯವಾಗಿರುತ್ತದೆ ಮತ್ತು ಅವರು ನೋಂದಣಿ ಮಾಡುವ ಮೂಲಕ ಅದನ್ನು ಪಡೆಯಬಹುದು.

ಲೇಬರ್ ಕಾರ್ಡ್ ಹೊಂದಿರುವಂತಹ ಅಭ್ಯರ್ಥಿಗಳು ಪಡೆಯುವ ಸೌಲಭ್ಯಗಳು.

ಅಪಘಾತ ಪರಿಹಾರ
ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ
ಪಿಂಚಣಿ ಮುಂದುವರಿಕೆ,
ದುರ್ಬಲ ಪಿಂಚಣಿ ಸೌಲಭ್ಯ
ತಾಯಿ ಮಗು ಸಹಾಯಾರ್ಥ
ದುರ್ಬಲ ಪಿಂಚಣಿ ಮುಂದುವರಿಕೆ
ಹೆರಿಗೆ ಸೌಲಭ್ಯ
ದುರ್ಬಲತೆ ಪಿಂಚಣಿ ಸೌಲಭ್ಯ
ಶೈಕ್ಷಣಿಕ ಸಹಾಯಧನ
ಅಂತ್ಯಕ್ರಿಯೆ ವೆಚ್ಚ
ಮದುವೆ ಸಹಾಯಧನ
ವೈದ್ಯಕೀಯ ಸಹಾಯಧನ
ಪಿಂಚಣಿ ಸೌಲಭ್ಯ
ಶ್ರಮ ಸಾಮರ್ಥ್ಯ
ಟೂಲ್ ಕಿಟ್
ಉಚಿತ ಸಾರಿಗೆ ಬಸ್ ಪಾಸ್ ಸೌಲಭ್ಯ.

ಲೇಬರ್ ಕಾರ್ಡ್ (labour card) ಪಡೆಯಲು ಇರಬೇಕಾದಂತಹ ಅರ್ಹತೆಗಳು

ಲೇಬರ್ ಕಾರ್ಡನ್ನು ನೀವು ಪಡೆಯಬೇಕು ಅಥವಾ ನೋಂದಣಿ ಮಾಡಬೇಕು ಎಂದರೆ ಅರ್ಹ ಅಭ್ಯರ್ಥಿಯು ಮೊದಲ 12 ತಿಂಗಳುಗಳ ಕಾಲ ಕಟ್ಟಡ ಮತ್ತು ಇತರೆ ನಿರ್ಮಾಣ ಕಾಮಗಾರಿಗಳಲ್ಲಿ ಕನಿಷ್ಠ 90 ದಿನಗಳು ಕೆಲಸ ನಿರ್ವಹಿಸಬೇಕು. ಕೆಲಸ ನಿರ್ವಹಿಸಿರುವುದಕ್ಕೆ ದಾಖಲೆಯನ್ನು ಹೊಂದಿರಬೇಕು ಹಾಗಿದ್ದರೆ ಮಾತ್ರ ಅವರಿಗೆ ಸರ್ಕಾರದಿಂದ ದೊರೆಯುವಂತಹ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ.

ಲೇಬರ್ ಕಾರ್ಡ ನಂದಣಿಗೆ ಬೇಕಾಗಿರುವಂತಹ ದಾಖಲಾತಿಗಳು

* 90 ದಿನಗಳ ಉದ್ಯೋಗ ದೃಢೀಕರಣ ಪತ್ರ
* ಅರ್ಜಿದಾರರ ಹಾಗೂ ಅವಲಂಬಿತರ ಆಧಾರ್ ಕಾರ್ಡ್ ಕಡ್ಡಾಯ.
* ಅರ್ಜಿದಾರರ ಬ್ಯಾಂಕ್ ಪಾಸ್ ಬುಕ್ ಪ್ರತಿ.
* ಅರ್ಜಿದಾರರ ಆಧಾರ್ ಕಾರ್ಡ್ ಗೆ ಲಿಂಕ್ ಇರುವಂತಹ ದೂರವಾಣಿ ಸಂಖ್ಯೆ.

ಲೇಬರ್ ಕಾರ್ಡ್ ಪಡೆಯಲು ಇರಬೇಕಾದ ವಯೋಮಿತಿ

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಯೋಮಿತಿಯು 18ರಿಂದ 60 ವರ್ಷಗಳ ಒಳಗೆ ಇರಬೇಕು ಹಾಗಿದ್ದರೆ ಮಾತ್ರ ಲೇಬರ್ ಕಾರ್ಡ್ ಪಡೆಯಲು ಅರ್ಹರಾಗಿರುತ್ತಾರೆ.

ಲೇಬರ್ ಕಾರ್ಡ್ ಗೆ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ನೀಡಿರುವ ಮಾಹಿತಿಯನ್ನು ಸಂಪರ್ಕಿಸಿ

ನಿಮಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಕಾರ್ಮಿಕ ಅಧಿಕಾರಿಗಳು ಮತ್ತು ಹಿರಿಯ ಕಾರ್ಮಿಕ ನಿರೀಕ್ಷಕರ ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬಹುದು ಹಾಗೆಯೇ ಸಹಾಯವಾಣಿ ಸಂಖ್ಯೆ 155214 ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಹಾಗೆ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ಇಲಾಖೆಯ ಪ್ರಮುಖ ಲಿಂಕ್‌ಗಳು ಲಭ್ಯವಿದೆ ಅವುಗಳಿಗೆ ಭೇಟಿ ನೀಡಿ ನೀವು ಮಾಹಿತಿಯನ್ನು ಪಡೆದುಕೊಳ್ಳಬಹುದು.

ಕಳಶ ಇಟ್ಟು ಪೂಜೆ ಮಾಡುವವರು ಈ ತಪ್ಪನ್ನು ಎಂದಿಗೂ ಮಾಡಲೇಬೇಡಿ.

ಆದರೆ ಕಟ್ಟಡ ಕಾರ್ಮಿಕರು ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಮಂಡಳಿಯೂ ನೀಡುವ ಕಾರ್ಮಿಕರ ಗುರುತಿನ ಚೀಟಿಯನ್ನು ಪಡೆದು ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ಕಾನೂನು ತನ್ನದೇ ಆದ ಕ್ರಮಗಳನ್ನು ಕೈ ಕೊಳ್ಳುತ್ತದೆ ಎನ್ನುವಂತಹ ಎಚ್ಚರಿಕೆಯನ್ನು ನೀಡಿದ್ದಾರೆ ಆದ್ದರಿಂದ ಅರ್ಹ ಅಭ್ಯರ್ಥಿಗಳು ಮಾತ್ರ ಕಟ್ಟಡ ಕಾರ್ಮಿಕರ ಕಾರ್ಡನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸುವುದು ಉತ್ತಮ. ಸರ್ಕಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕಾದರೆ ಅರ್ಹವಾಗಿರುವಂತಹ ಅಭ್ಯರ್ಥಿಗಳು ಈ ವಿಷಯವನ್ನು ತಿಳಿದುಕೊಂಡು ಲೇಬರ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಿ ಸರ್ಕಾರದ ವತಿಯಿಂದ ನೀಡಿರುವ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು.