ʻಗೃಹಜ್ಯೋತಿʼ ಫಲಾನುಭವಿಗಳಿಗೆ ಸರ್ಕಾರದಿಂದ ಮಹತ್ವದ ಘೋಷಣೆ.!

ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಭರ್ಜರಿ ಗುಡ್‌ ನ್ಯೂಸ್‌ ನೀಡಿದೆ. ಹೌದು, ಕಾಂಗರೆಸ್‌ನ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಈ ಸೌಲಭ ಒದಗಿ ಬಂದಿದೆ. ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ಗೃಹ ಜ್ಯೋತಿ ಯೋಜನೆಯನ್ನು ಪರಿಚಯಿಸಿದೆ.

WhatsApp Group Join Now
Telegram Group Join Now

ಈ ಯೋಜನೆಯಡಿ ಅರ್ಹರಿಗೆ ಉಚಿತ ವಿದ್ಯುತ್ ಅನ್ನು ನೀಡುತ್ತಿದೆ. ಜುಲೈ ನಿಂದ ಗೃಹ ಜ್ಯೋತಿ ಯೋಜನೆಯಡಿ ಅರ್ಹರು ಉಚಿತ ವಿದ್ಯುತ್ ನ ಲಾಭವನ್ನು ಪಡೆಯುತ್ತಿದ್ದಾರೆ. ಇನ್ನು ಗೃಹ ಜ್ಯೋತಿ ಯೋಜನೆಯಡಿ ರಾಜ್ಯದ ಜನತೆ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ. ತಿಂಗಳ ಸರಾಸರಿ ಲೆಕ್ಕಾಚಾರದ ಆಧಾರದ ಮೇಲೆ ಉಚಿತ ವಿದ್ಯುತ್ ಅನ್ನು ನೀಡಲಾಗುತ್ತಿದೆ.

ರಾಜ್ಯ ಸರ್ಕಾರ ಗೃಹ ಜ್ಯೋತಿ ಯೋಜನೆಯಡಿ 200 ಯೂನಿಟ್ ಉಚಿತ ವಿದ್ಯುತ್ ಅನ್ನು ನೀಡುತ್ತಿತ್ತು. ತಿಂಗಳ ಸರಾಸರಿ ಲೆಕ್ಕಾಚಾರದ ಮೇಲೆ ಫಲಾನುಭವಿಗಳು ಉಚಿತ ವಿದ್ಯುತ್ ಅನ್ನು ಪಡೆಯುತ್ತಿದ್ದರು. ಇದೀಗ ಗೃಹಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಇನ್ನೊಂದು ಗುಡ್ ನ್ಯೂಸ್ ಹೊರಬಿದ್ದಿದೆ. ಉಚಿತ ವಿದ್ಯುತ್ ಫಲಾನುಭವಿಗಳಿಗೆ ಸೌಲಭ್ಯ ದುಪ್ಪಟಾಗಲಿದೆ.

ನಮ್ಮ WhatsApp ಗುಂಪಿಗೆ ಜಾಯಿನ ಆಗಿ Join Now
ಈ ಸುದ್ದಿ ತಪ್ಪದೆ ಓದಿ :- ನಿಮ್ಮ ಜಮೀನಿನ ಎಲ್ಲಾ ಹಳೆಯ ದಾಖಲೆಗಳ ಬಗ್ಗೆ ನಿಮ್ಮ ಮೊಬೈಲ್‌ನಲ್ಲೇ ಚೆಕ್ ಮಾಡುವ ವಿಧಾನ.!

ನಿಗದಿತ ಯೂನಿಟ್ ಗಿಂತ ಹೆಚ್ಚಾಗಿ ವಿದ್ಯುತ್ ಅನ್ನು ಬಳಕೆ ಮಾಡುತ್ತಿದ್ದರೆ ಅಂತವರು ಹೆಚ್ಚುವರಿ ಕರೆಂಟ್ ಬಿಲ್ ಅನ್ನು ಪಾವತಿಸಬೇಕಾಗುತ್ತದೆ. ಹೆಚ್ಚುವರಿಯಾಗಿ ಬಳಕೆ ಮಾಡಿರುವ ವಿದ್ಯುತ್ ಗೆ ಇಲಾಖೆ ಕರೆಂಟ್ ಬಿಲ್ ಅನ್ನು ನೀಡುತ್ತಿದೆ. ಸದ್ಯ ಮಾಸಿಕ ಇಷ್ಟು ಯೂನಿಟಾ ಉಚಿತ ವಿದ್ಯುತ್ ಅನ್ನು ನೀಡಲು ಸರ್ಕಾರ ಮುಂದಾಗಿದೆ.

ಗೃಹ ಜ್ಯೋತಿ ಫಲಾನುಭವಿಗಳಿಗೆ ಇನ್ನುಮುಂದೆ 10 ಯೂನಿಟ್ ಉಚಿತ ವಿದ್ಯುತ್

ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಂಚಿಕೊಂಡಿದ್ದು, ಗೃಹಜ್ಯೋತಿ ಯೋಜನೆಯಡಿ ಮಾಸಿಕ 48 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ 70 ಲಕ್ಷ ಗ್ರಾಹಕರಿಗೆ ಇನ್ನುಮುಂದೆ ಮಾಸಿಕ 10% ಹೆಚ್ಚುವರಿ ವಿದ್ಯುತ್ ಬದಲಾಗಿ 10 ಯುನಿಟ್ ಹೆಚ್ಚುವರಿ ಉಚಿತ ವಿದ್ಯುತ್.ಪ್ರತಿ ಮನೆಗೆ ಭರವಸೆಯ ಬೆಳಕು ಹರಿಸುವ ಸರ್ಕಾರದ ಕಾರ್ಯಕ್ರಮ ಈಗ ಇನ್ನಷ್ಟು ಜನಸ್ನೇಹಿ ಎಂದು ಪೋಸ್ಟ್ ಮಾಡಿದ್ದಾರೆ.

ಗೃಹ ಜ್ಯೋತಿ ಯೋಜನೆಯಡಿಯಲ್ಲಿ ಮಾಸಿಕ ಅರ್ಹ 48 ಯೂನಿಟ್ಗಿಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಶೇ. 10 ರಷ್ಟು ಹೆಚ್ಚುವರಿ ವಿದ್ಯುತ್ಗೆ ಬದಲಾಗಿ 10 ಯೂನಿಟ್ ಹೆಚ್ಚುವರಿ ಉಚಿತ ವಿದ್ಯುತ್.ಸರಾಸರಿ 48 ಯೂನಿಟ್ ಗಿಂತ ಕಡಿಮೆ ಬಳಸುವ ಸುಮಾರು 70 ಲಕ್ಷ ಗ್ರಾಹಕರಿಗೆ ಇದರಿಂದ ಪ್ರಯೋಜನ ಸಿಗಲಿದೆ.

ಈ ಸುದ್ದಿ ತಪ್ಪದೆ ಓದಿ :- ನಿಮಗೆ ಸ್ವಂತ ಮನೆ ಕಟ್ಟಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲಿವೆ ಈ 5 ಬ್ಯಾಂಕ್‌ಗಳು.! ಎಷ್ಟು ಸಾಲ ಸಿಗುತ್ತೆ, ಬಡ್ಡಿ ಎಷ್ಟು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ರಾಜ್ಯ ಸರ್ಕಾರದ ನಿರ್ಧಾರದಿಂದ ಅತ್ಯಂತ ಕಡಿಮೆ ವಿದ್ಯುತ್ ಬಳಸುವ ಗ್ರಾಹಕರಿಗೆ ಇನ್ನು ಮುಂದೆ ಸಂಪೂರ್ಣ ಶೂನ್ಯ ಬಿಲ್ ಸಿಗಲಿದೆ. ರಾಜ್ಯ ಸರ್ಕಾರ ಇದಕ್ಕೆ ವಾರ್ಷಿಕ 398 ಕೋಟಿ ರೂ.ಗಳ ಹೆಚ್ಚುವರಿ ಸಹಾಯಧನ ನೀಡಲಿದೆ. ʻನುಡಿದಂತೆ ನಡೆದಿದ್ದೇವೆʼ ಎಂದು ಸಿಎಂ ಸಿದ್ದರಾಮಯ್ಯ ಪೋಸ್ಟ್ ಹಂಚಿಕೊಂಡಿದ್ದಾರೆ.

ಗೃಹ ಜ್ಯೋತಿಗೆ ಹೊಸ ನಿಯಮಗಳು ಇಂತಿವೆ…

ಈಗ ಕರ್ನಾಟಕ ಸಚಿವ ಸಂಪುಟ ಶೇ.10ರಷ್ಟು ಹೆಚ್ಚುವರಿ ಘಟಕಗಳನ್ನು ಕೈಬಿಟ್ಟಿದೆ. ಬದಲಾಗಿ, ಗರಿಷ್ಠ 200 ಯೂನಿಟ್‌ಗಳವರೆಗೆ ಬಳಕೆಯನ್ನು ಲೆಕ್ಕಿಸದೆ 10 ಹೆಚ್ಚುವರಿ ಯುನಿಟ್‌ ವಿದ್ಯುತ್‌ ಅನ್ನು ಗ್ರಾಹಕರಿಗೆ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಉದಾಹರಣೆಗೆ, ಗ್ರಾಹಕರ ಸರಾಸರಿ ಬಳಕೆಯು 80 ಯುನಿಟ್‌ಗಳಾಗಿದ್ದರೆ, ಅವನು/ಅವಳು 90 ಯೂನಿಟ್‌ಗಳ ಉಚಿತ ಬಳಕೆಗೆ ಅರ್ಹರಾಗಿರುತ್ತಾರೆ. ಅದೇ ರೀತಿ, ಒಬ್ಬ ಗ್ರಾಹಕನ ಸರಾಸರಿ ಬಳಕೆಯು 165 ಯುನಿಟ್‌ಗಳಾಗಿದ್ದರೆ, ಅವನು / ಅವಳು 175 ಯೂನಿಟ್‌ಗಳಿಗೆ ಉಚಿತ ವಿದ್ಯುತ್ ಪಡೆಯಲು ಅರ್ಹರಾಗಿರುತ್ತಾರೆ. ಫೆಬ್ರವರಿಯಲ್ಲಿ ರಚಿಸಲಾದ ಬಿಲ್‌ನಿಂದ ಹೊಸ ನಿಯಮವನ್ನು ಜಾರಿಗೊಳಿಸುವ ಸಾಧ್ಯತೆಯಿದೆ.

ಹೊಸ ನಿಯಮವು 100 ಯೂನಿಟ್‌ಗಿಂತ ಕಡಿಮೆ ಇರುವ ಗ್ರಾಹಕರಿಗೆ ಸಹಾಯ ಮಾಡುತ್ತದೆ. 100 ಯೂನಿಟ್‌ಗಿಂತ ಹೆಚ್ಚಿನ ಬಳಕೆದಾರರಿಗೆ ಇದು ಅನನುಕೂಲವಾಗಿದೆ. ಇಂಧನ ಸಚಿವ ಕೆ.ಜೆ.ಜಾರ್ಜ್ ಮಾತನಾಡಿ, ಈ ಹೊಸ ನಿಯಮದಿಂದ ಸರ್ಕಾರ ಹೆಚ್ಚುವರಿಯಾಗಿ 500 ರಿಂದ 600 ಕೋಟಿ ರೂ. ಆದಾಯ ನಿರೀಕ್ಷೆ ಮಾಡಿದೆ ಎಂದು ತಿಳಿಸಿದ್ದಾರೆ.

ಈ ಸುದ್ದಿ ತಪ್ಪದೆ ಓದಿ :- ಕುರಿ, ಕೋಳಿ, ಮೇಕೆ, ಹಸು ಸಾಕಾಣಿಕೆ ಸರ್ಕಾರವೇ ನಿಮಗೆ ನೀಡಲಿದೆ 20 ಲಕ್ಷ ಸಾಲ.! 7 ಲಕ್ಷ ಸಬ್ಸಿಡಿ.!

ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಐದು ಗ್ಯಾರಂಟಿಗಳಲ್ಲಿ ‘ಗೃಹ ಜ್ಯೋತಿ’ ಯೋಜನೆಯೂ ಒಂದು. ಕಳೆದ ವರ್ಷ ಆಗಸ್ಟ್‌ನಲ್ಲಿ ಕಲಬುರಗಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಿದ್ದರು.

“ಗೃಹ ಜ್ಯೋತಿ” (Gruha Jyoti Scheme) ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

* “ಗೃಹ ಜ್ಯೋತಿ” ಯೋಜನೆ ಅಡಿಯಲ್ಲಿ ಉಚಿತ ಸೌಲಭ್ಯ ಪಡೆಯಲು ಇಚ್ಛೆಯಿರುವ ಗ್ರಾಹಕರು ಕೇಳಗೆ ನೀಡಿರುವ ಸೇವಾ ಸಿಂಧು ಪೋರ್ಟಲ್ ಅಧಿಕೃತ ಲಿಂಕ್‌ (https://sevasindhugs.karnataka.gov.in gruha jyothi) ಮೇಲೆ ಕ್ಲಿಕ್‌ ಮಾಡಿ.
* ಅಲ್ಲಿ “ಗೃಹ ಜ್ಯೋತಿ” ಎಂದು ನಮೂದಿಸಲಾಗಿರುತ್ತದೆ. ಅದರ ಮೇಲೆ ಕ್ಲಿಕ್‌ ಮಾಡಿ.
* ಮುಂದಿನ ಲಿಂಕ್‌ನಲ್ಲಿ “ಗೃಹ ಜ್ಯೋತಿ” Gruha Jyoti Scheme ಆನ್‌ಲೈನ್‌ ಅರ್ಜಿ ಸಿಗುತ್ತದೆ.

* ನಂತರ ಅಲ್ಲಿ ಎಸ್ಕಾಂ ಹೆಸರು, Account ID/Connection ID ಟೈಪಿಸಿ ನಿಮ್ಮ ಹೆಸರು, ವಿಳಾಸ ಅಲ್ಲಿ ತಂತಾನೆ ಭರ್ತಿಯಾಗುತ್ತದೆ.
* ಆದಾದ ನಂತರ ನೀವು ಮಾಲಿಕರ ಅಥವಾ ಬಾಡಿಗೆದಾರರ, ಅಥವಾ ಕುಟುಂಬದ ಸದಸ್ಯರ ಎನ್ನುವುದನ್ನು ನಮೂದಿಸಬೇಕು, ನಿಮ್ಮ ಆಧಾರ ಸಂಖ್ಯೆ, ಆಧಾರ ಕಾರ್ಡ್‌’ಯನ್ನು ಟೈಪಿಸಿ ಆಧಾರ ನಲ್ಲಿ ಇರುವಂತೆ ಹೆಸರು ಬರುತ್ತದೆ. ಮೊಬೈಲ್‌ ನಂಬರ್‌ʼನ್ನು ಅಲ್ಲಿ ಭರ್ತಿ ಮಾಡಬೇಕು.

* ನಿಮ್ಮ ನಂಬರ್ ಗೆ ಒಂದು OTP ಬರುತ್ತದೆ. ಓಟಿಪಿ ಎಂಟರ್ ಮಾಡಿ Validate ಮೇಲೆ ಕ್ಲಿಕ್ ಮಾಡಿ.
* I Agree ಅಂತ ಇರುತ್ತದೆ ಅದರ ಮೇಲೆ ಕ್ಲಿಕ್‌ ಮಾಡಬೇಕು.
* ಕಡೆಯದಾಗಿ Word verification ಅಂತ ಇರುವಲ್ಲಿ ಅಲ್ಲಿ ಕಾಣುವ ನಂಬರನ್ನು ಕೇಳಗೆ ನೀಡಿರುವ ಬಾಕ್ಸ್‌ನಲ್ಲಿ ತುಂಬಬೇಕು. ನಂತರ Submit ಮೇಲೆ ಕ್ಲಿಕ್‌ ಮಾಡಿ.

ಈ ಸುದ್ದಿ ತಪ್ಪದೆ ಓದಿ :- ತಂದೆ, ತಾತ, ಮುತ್ತಾತನ ಹೆಸರಿನಲ್ಲಿರುವ ಜಮೀನನ್ನು ವರ್ಗಾವಣೆ ಮಾಡ್ಕೊಬೇಕಾ.? ಇಲ್ಲಿದೆ ನಿಮಗೊಂದು ಸುವರ್ಣಾವಕಾಶ.!

* ಮುಂದಿನ ಪೇಜ್ ನಲ್ಲಿ ನೀವು ಭರ್ತಿ ಮಾಡಿರುವ ಮಾಹಿತಿ ಅಲ್ಲಿ ತೋರಿಸುತ್ತದೆ. ಅದನ್ನು ಪರಿಶೀಲಿಸಿ ಎಲ್ಲವೂ ಸರಿಯಾಗಿದೆವೋ ಇಲ್ಲವೊ ನೋಡಿ Submit ಬಟನ್ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಅರ್ಜಿ Submit ಆದ ನಂತರ ಸ್ವೀಕೃತಿ PDF ಲಭ್ಯವಾಗುತ್ತದೆ ಅದನ್ನು ಡೌನ್’ಲೋಡ್ ಮಾಡಿಕೊಳ್ಳಿ.
* ಇಲ್ಲಿಗೆ ನಿಮ್ಮ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಗಿಯುತ್ತದೆ.