ಗ್ರಾಮ್ ಒನ್ ಕೇಂದ್ರ ಈಗ ಎಲ್ಲ ತಾಲೂಕು ಮಟ್ಟದ ಹಾಗೂ ಗ್ರಾಮ ಮಟ್ಟದಲ್ಲಿ ಇದೆ. ಯಾವುದೇ ಸರ್ಕಾರಿ ಯೋಜನೆಗೆ ಅಥವಾ ಯಾವುದೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡುವುದು ಈಗ ಸಾಮಾನ್ಯ. ಸರ್ಕಾರ ಮತ್ತು ಜನರ ನಡುವೆ ಸಮರ್ಪಕ ಮಾಹಿತಿ ಒದಗಿಸುವ ಕೇಂದ್ರ ಎಂದರೆ, ಅದು ʻಗ್ರಾಮ್ ಒನ್ʼ.
ಭಾರತದಾದ್ಯಂತ ಹಲವಾರು ಕಡೆ ಗ್ರಾಮ್ ಒನ್ ಸೇವಾ ಕೇಂದ್ರ ಇದೆ. ಜನರಿಗೆ ನೆರವಾಗುವ ನಿಟ್ಟಿನಲ್ಲಿ ಗ್ರಾಮ್ ಒನ್ ಕೇಂದ್ರ ತೆರೆಯಲು ಇಚ್ಚಿಸುವವರು ಅರ್ಜಿ ಸಲ್ಲಿಸಬಹುದು. ಸ್ವಂತ ಉದ್ಯಮ ಮಾಡಲು ಬಯಸುವ ಯುವಕರಿಗೆ ಇದು ಒಂದು ಒಳ್ಳೆಯ ಅವಕಾಶ ಆಗಿದೆ. ಪ್ರಾಂಚೈಸಿಗಳಿಗೆ ಸರ್ಕಾರದಿಂದ ತರಬೇತಿ, ಮಾರ್ಗದರ್ಶನ ಮತ್ತು ಆರ್ಥಿಕ ಸಹಾಯ ಸಿಗುತ್ತದೆ. ಹಾಗಾದರೆ, ಅರ್ಜಿ ಸಲ್ಲಿಸುವ ವಿಧಾನ ಹಾಗೂ ಅರ್ಜಿ ಸಲ್ಲಿಸಲು ರೂಲ್ಸ್ ಗಳು ಏನೇನು ಇವೆ ಎಂಬುದನ್ನು ತಿಳಿಯೋಣ.
ಗ್ರಾಮ ಒನ್ ಬಗ್ಗೆ ಪರಿಚಯ
ಗ್ರಾಮ ಒನ್ ಎಂಬುವುದು ಗ್ರಾಮೀಣ ಮಟ್ಟದಲ್ಲಿ ಎಲ್ಲಾ ನಾಗರೀಕ ಕೇಂದ್ರೀಕೃತ ಏಕ ಸಹಾಯಕ ಕೇಂದ್ರ ವ್ಯವಸ್ಥೆ ಆಗಿರುತ್ತದೆ. ಇದರಲ್ಲಿ ಜಿ2ಸಿ ಸೇವೆಗಳು, ಬ್ಯಾಂಕಿಂಗ್ ಸೇವೆಗಳು, ಆರ್ ಟಿ ಐ ಇತ್ಯಾದಿಗಳು ಒಳಗೊಂಡಿರುತ್ತವೆ 2020-21ರ ಹಣಕಾಸು ವರ್ಷದ ಆಯವ್ಯಯ ಪತ್ರದಲ್ಲಿ ಗೌರವಾನ್ವಿತ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು ಇದನ್ನು ಘೋಷಿಸಿದರು. ವಾರದ ಎಲ್ಲಾ ಏಳು (7) ದಿನಗಳಲ್ಲಿ ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆವರೆಗೂ ಗ್ರಾಮ ಒನ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು
ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಖಾತೆಯ ಮಾಹಿತಿ, ಪ್ರಾಂಚೈಸಿ ಆರಂಭಿಸಿಲು ಉದ್ದೇಶಿಸಿರುವ ಸ್ಥಳದ ಬಗ್ಗೆ ಮಾಹಿತಿ, ಗಣಕಯಂತ್ರ, ಜೆರಾಕ್ಸ್ ಮಶೀನ್, ಪ್ರಿಂಟರ್, ಹಾಗೂ ಇನ್ನಿತರ ಉಪಕರಣಗಳು.
ಪ್ರಾಂಚೈಸಿ ನಿರ್ಮಿಸುವ ಸ್ಥಳಗಳು
ನಿಟ್ಟೂರು, ಕೆ.ಬಡಗ, ಬಿ.ಶೆಟ್ಟಿಗೇರಿ, ಕಿರುಗೂರು, ಬಲ್ಯಮಂಡೂರು, ಪೊನ್ನಂಪೇಟೆಯ ನಾಲ್ಕೇರಿ, ಬೆಟ್ಟದಳ್ಳಿ, ಸೋಮವಾರಪೇಟೆಯ ಗರ್ವಾಲೆ ಕಾಕೋಟು ಪರಂಬು, ಬೇಟೋಳಿ, ಮಡಿಕೇರಿಯ ಹೊಕ್ಕೇರಿ ಹಾಕತ್ತೂರು ಮತ್ತು ಕರಿಕೆ ಗ್ರಾಮಗಳಲ್ಲಿ ಪ್ರಾಂಚೈಸಿ ತೆರೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ವೆಬ್ಸೈಟ್ ಲಿಂಕ್ ಇಲ್ಲಿ ಕ್ಲಿಕ್ ಮಾಡಿ. ಗ್ರಾಮ ಒನ್ ಫ್ರಾಂಚೈಸಿ ತೆರೆಯಲು ಅರ್ಜಿ ಭರ್ತಿ ಮಾಡಿ ಸೂಕ್ತ ದಾಖಲೆಗಳನ್ನು ನೀಡಬೇಕು.
ಗ್ರಾಮ ಒನ್ ಕೇಂದ್ರವನ್ನೂ ಸರ್ಕಾರ ಆರಂಭಿಸಿದ ಉದ್ದೇಶಗಳು ಏನು?
* ಗ್ರಾಮೀಣ ಮಟ್ಟದಲ್ಲಿ ಎಲ್ಲಾ ನಾಗರಿಕರಿಗೆ ಒಂದೇ ಕಡೆಯಲ್ಲಿ ಸರ್ಕಾರಿ ಸೇವೆಗಳು ಸಿಗುವಂತೆ ಮಾಡುವುದು.
* ಸರ್ಕಾರಿ ಕೆಲಸಗಳಿಗೆ ಜಿಲ್ಲೆ, ತಾಲ್ಲೂಕು, ಹೋಬಳಿ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲದೆ ಸ್ಥಳೀಯವಾಗಿ ಸೇವೆಗಳನ್ನು ಒದಗಿಸುವುದು.
* ಮಧ್ಯವರ್ತಿಗಳ ಮೇಲಿನ ಅವಲಂಬನೆ ಕಡಿಮೆ ಮಾಡಿ ಭ್ರಷ್ಟಾಚಾರ ತಡೆಯಲು.
* ತರಬೇತಿ ಪಡೆದ ಸಿಬ್ಬಂದಿಗಳ ಮೂಲಕ ಜನರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸುವುದು.
* ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ಉತ್ತೇಜನ ನೀಡುವುದು.
ಗ್ರಾಮ ಒನ್ ಕೇಂದ್ರಗಳಲ್ಲಿ ಪಡೆಯಬಹುದಾದ ಸೇವೆಗಳು
750 ಕ್ಕೂ ಹೆಚ್ಚು ಸರ್ಕಾರಿ ಸೇವೆಗಳನ್ನು ಪಡೆಯಬಹುದು. ಸಕಾಲದಲ್ಲಿ ಜನನ, ಮರಣ ಮದುವೆ ಪ್ರಮಾಣಪತ್ರ ಸಿಗುತ್ತದೆ. ಯಾವುದೇ ಆಸ್ತಿ ಕಚೇರಿ , ಯಾವುದೇ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆಯುತ್ತದೆ. ರಾಜ್ಯ ಅಥವಾ ಕೇಂದ್ರ ಮಂತ್ರಿಗಳ ಕಚೇರಿಗೆ ದೂರು ಸಲ್ಲಿಸಬಹುದು. ಅಷ್ಟೇ ಅಲ್ಲದೆ ಯಾವುದೇ ಸ್ಕೀಮ್ ನ ಹಣ ತಾಂತ್ರಿಕ ದೋಷದಿಂದ ಬಾರದೆ ಇದ್ದರೆ ಸಮಸ್ಯೆಯ ಪರಿಹಾರ ಶೀಘ್ರ ಆಗಲಿದೆ. ಗ್ರಾಮ್ ಒನ್ ಕೇಂದ್ರವು ಈಗಾಗಲೇ ನಿಮ್ಮ ಸ್ಥಳದ ಹತ್ತಿರವೂ ಇರುತ್ತದೆ. ನಿಮ್ಮ ಯಾವುದೇ ಸರಕಾರಿ ಸಂಬಂಧಿತ ಸಮಸ್ಯೆಗಳಿಗೆ ಗ್ರಾಮ್ ಒನ್ ಕೇಂದ್ರಕ್ಕೆ ಭೇಟಿ ನೀಡಿ.
ಗ್ರಾಮ ಒನ್ ಕೇಂದ್ರದಿಂದ ಸಾರ್ವಜನಿಕರಿಗೆ ಸಿಗುವ ಲಾಭಗಳು
* ಸರ್ಕಾರಿ ಸೇವೆಗಳನ್ನು ಪಡೆಯಲು ಜಿಲ್ಲೆ, ತಾಲ್ಲೂಕ್ ಮತ್ತು ಹೊಬ್ಲಿ, ಕಚೇರಿಗಳಿಗೆ ಭೇಟಿ ನೀಡುವ ಅವಶ್ಯಕತೆ ಇಲ್ಲ.
* ಗ್ರಾಮ ಒನ್ ಕೇಂದ್ರಗಳ ಮೂಲಕ ಸೇವೆಗಳನ್ನು ಪಡೆಯುವ ಮೂಲಕ ನಾಗರಿಕರು ಸಮಯ ಮತ್ತು ಹಣವನ್ನು ಉಳಿಸಬಹುದು.
* ಮಧ್ಯವರ್ತಿಗಳ ಹಾವಳಿ ಭೀತಿ ಇರುವುದಿಲ್ಲ.
* ಗ್ರಾಮ ಒನ್ ಕೇಂದ್ರಗಳು ಬೆಳಿಗ್ಗೆ 8.00 ರಿಂದ ರಾತ್ರಿ 8.00 ಗಂಟೆವರೆಗೂ ಕಾರ್ಯ ನಿರ್ವಹಿಸುತ್ತವೆ ಆದ್ದರಿಂದ ನಾಗರಿಕರು ಅವರಿಗೆ ಅನುಕೂಲವಾದ ಸಮಯದಲ್ಲಿ ಸೇವೆಗಳನ್ನು ಪಡೆಯಬಹುದು.
ಕೇಂದ್ರವನ್ನು ಸ್ಥಾಪಿಸಲು ಬೇಕಾಗುವ ಮಾಹಿತಿ ತಂತ್ರಜ್ಞಾನ ಮೂಲ ಸೌಕರ್ಯಗಳು
* ಡೆಸ್ಕ್ ಟಾಪ್/ ಲ್ಯಾಪ್ ಟಾಪ್/ ( ಐ 3 ಸಂರಚನೆಗಿಂತ ಹೆಚ್ಚಿನವುಗಳದ್ದು)
ವಿವಿಧ ಕಾರ್ಯಕಾರಿ ಪ್ರಿಂಟರ್ ( ಪ್ರಿಂಟ್/ಸ್ಕ್ಯನ್)
* ಬಯೋಮೆಟ್ರಿಕ್ ಸ್ಕ್ಯಾನರ್ ( ಸೆಕ್ಯುಜನ್ ಹ್ಯಾಮ ಸ್ಟಾರ್ ಪ್ರೊ20)
* ವೆಬ್ ಕ್ಯಾಮೆರಾ
* ವೈ ಫೈ ರಿಸೀವರ್
* ಇಬ್ಬರು ಅಂತರ್ಜಾಲ ಸೇವೆ ಒಂದಗಿಸುವುದರಿಂದ ಅಂತರ್ಜಾಲ ಸಂಪರ್ಕ ಹೊಂದಿರಬೇಕು ( ಐ ಎಸ್ ಪಿ ಎಸ್ ) ಕಾರಣ ಅಂತರ್ಜಾಲ ಸಂಪರ್ಕ ವ್ಯವಸ್ತೆಯ ವೃತಿರಕ್ತತೆಯಿಂದ ಸೇವೆಗಳಿಗೆ ಅಡ್ಡಿ ಉಂಟಾಗಬಹುದು ಎಂಬ ಕಾರಣಕ್ಕಾಗಿ ಆ ವ್ಯವಸ್ಥೆ ಇರಬೇಕು.
ಅರ್ಹತಾ ಮಾನದಂಡಗಳು
* ಕಂಪ್ಯೂಟರ್ ಜ್ಞಾನ ಹೊಂದಿರುವ ಯಾವುದೇ ವಿಭಾಗದಲ್ಲೂ ಪದವಿದರನಾಗಿರಬೇಕು ಕನಿಷ್ಟ ಅರ್ಹತೆ ಹೊಂದಿರುತ್ತದೆ.
* ರೂ.1 ರಿಂದ 2 ಲಕ್ಷ ಬಂಡವಾಳ ಹೂಡಿಕೆ ಮಾಡುವ ಸಾಮರ್ಥ್ಯ ಇರಬೇಕು.
* ಗ್ರಾಮ ಒನ್ ಪೊಲೀಸ್ ತಪಾಸಣೆ ಪ್ರಮಾಣ ಪತ್ರ ಸಲ್ಲಿಸಬೇಕು.
* ಕೇಂದ್ರ ಸ್ಥಾನದಲ್ಲಿ ಇರಬೇಕು.