ಇಂದು ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಣೆ ಸಣ್ಣ ರೈತರು, ಕೃಷಿ ಕಾರ್ಮಿಕರು, ರೈತ ಮಹಿಳೆಯರು ಹಾಗೂ ರೈತ ಮಕ್ಕಳಿಗೆ ಹೊಸ ಭರವಸೆಯ ಕಿರಣವಾಗಿದೆ. ಹವಾಮಾನ ವೈಪರಿತ್ಯದಿಂದ ಕೃಷಿ ಆದಾಯ ಕೈಕೊಟ್ಟಾಗ ಜೀವನಕ್ಕೆ ಆಸರೆಯಾಗುವುದೇ ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಣೆಯ ಆದಾಯ.
ಹೈನುಗಾರಿಕೆಯಲ್ಲಿ ಹಾಲು, ಗೊಬ್ಬರ, ಗಂಜಲದಿ೦ದ ಆದಾಯ ದೊರೆತರೆ, ಆಡು-ಕುರಿಗಳ ಸಾಕಣೆಯಲ್ಲಿ ಮಾಂಸ, ಹಾಲು, ಚರ್ಮ, ಉಣ್ಣೆ, ಗೊಬ್ಬರ ಮಾರಿ ಲಾಭ ಗಳಿಸಬಹುದು. ಹೀಗಾಗಿ ಅನೇಕ ಯುವ ಉತ್ಸಾಹಿಗಳು ಹೈನುಗಾರಿಕೆ, ಆಡು-ಕುರಿ ಸಾಕಣೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸತೊಡಗಿದ್ದಾರೆ.
ಆದರೆ, ಅನೇಕರು ಹೈನುಗಾರಿಕೆ ಮತ್ತು ಕುರಿ-ಮೇಕೆ ಸಾಕಣೆಯಲ್ಲಿ ಸೂಕ್ತ ಅನುಭವ, ಮಾಹಿತಿ ಇಲ್ಲದೇ ನಷ್ಟ ಅನುಭವಿಸುತ್ತಿದ್ದಾರೆ. ದೊಡ್ಡ ದೊಡ್ಡ ಪ್ರಾಜೆಕ್ಟು, ಬೃಹತ್ ಶೆಡ್ಡು, ವಿದೇಶಿ ತಳಿಗಳ ಆಕರ್ಷಣೆಗೆ ಒಳಗಾಗದೇ, ಸಣ್ಣಪುಟ್ಟ ಆಧುನಿಕ ತಾಂತ್ರಿಕತೆಯನ್ನು ಬಳಸಿಕೊಂಡು ಸರಳ ಪದ್ಧತಿ ಅಳವಡಿಸಿಕೊಂಡರೆ ಹೈನುಗಾರಿಕೆ ಮತ್ತು ಆಡು-ಕುರಿ ಸಾಕಣೆಯದಲ್ಲಿ ಗೆಲುವು ಸುಲಭ.
ಈ ಸುದ್ದಿ ಓದಿ:- ಕೇಂದ್ರದಿಂದ ʻಪಿಂಚಣಿ ಯೋಜನೆʼಯಲ್ಲಿ ಮಹತ್ವದ ಬದಲಾವಣೆ.!
ಮೇಕೆ/ ಆಡು ಸಾಕಾಣಿಕೆ ಕುರಿತ 10 ದಿನಗಳ ಉಚಿತ ತರಬೇತಿ ಇದೇ ಫೆ.12 ರಿಂದ 21 ರವರೆಗೆ 10 ದಿನಗಳ ಕಾಲ ಆಯೋಜಿಸಲಾಗಿದ್ದು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು ಅರ್ಜಿ ಸಲ್ಲಿಸಬಹುದಾಗಿದೆ.
ಕುರಿ-ಮೇಕೆ ಸಾಕಾಣಿಕೆಗೆ ಸರ್ಕಾರದಿಂದ ಯಾವೆಲ್ಲ ಯೋಜನೆಯಡಿ ಸಹಾಯಧನ ಪಡೆಯಬಹುದು? ಅರ್ಜಿ ಸಲ್ಲಿಕೆ ವಿಧಾನ ಹೇಗಿರುತ್ತದೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಅರ್ಜಿ ವಿಲೇವಾರಿ ಪ್ರಕ್ರಿಯೆ ಇತ್ಯಾದಿ ಮಾಹಿತಿ ತಿಳಿಸಿಕೊಡಲಾಗುತ್ತದೆ. ಒಟ್ಟಿನಲ್ಲಿ ಸಂಕ್ಷೀಪ್ತವಾಗಿ ಕುರಿ-ಮೇಕೆ ಸಾಕಾಣಿಕೆ ಪ್ರಾರಂಭಿಸಲು ಅಗತ್ಯ ಮಾಹಿತಿಯನ್ನು ಈ ತರಬೇತಿಯಲ್ಲಿ ಅಭ್ಯರ್ಥಿಗಳು ಪಡೆದುಕೊಳ್ಳಬಹುದು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಉಚಿತ ತರಬೇತಿಗೆ ಆಸಕ್ತ 18 ರಿಂದ 45 ವರ್ಷ ವಯೋಮಾನದವರು ಅರ್ಜಿ ಸಲ್ಲಿಸಬಹುದು.
ಈ ಸುದ್ದಿ ಓದಿ:- ಸರ್ಕಾರಿ ಉದ್ಯೋಗ ನಿರೀಕ್ಷೆಯಲ್ಲಿರುವವರಿಗೆ ಭರ್ಜರಿ ಗುಡ್ ನ್ಯೂಸ್; ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 83,900 ಆಸಕ್ತರು ಅರ್ಜಿ ಸಲ್ಲಿಸಿ.!
ಮೇಕೆ ಸಾಕಾಣಿಕೆ ಬಗ್ಗೆ ಇತರೆ ಮಾಹಿತಿ
ಅರ್ಜಿ ಸಲ್ಲಿಸುವವರು ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್‌ನ್ನು ಹಾಗೂ ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಗ್ರಾಮೀಣ ಪ್ರದೇಶದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು. ಅರ್ಜಿ ಸಲ್ಲಿಸಲು ಫೆಬ್ರವರಿ 11 ಕೊನೆಯ ದಿನವಾಗಿದೆ.
ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 8884554510, 9740982585, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್‌ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ್ ತಿಳಿಸಿದ್ದಾರೆ.
ತರಬೇತಿಗೆ ಯಾವ ಯಾವ ದಾಖಲೆ ಬೇಕು?
ಕುರಿ ಮೇಕೆ ಸಾಕಾಣಿಕೆ ಪಡೆಯಲಿಚ್ಚಿಸುವ ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಪಡಿತರ ಚೀಟಿ ಇರಬೇಕು. ಇತ್ತೀಚಿನ ಫೋಟೋ ಇರಬೇಕು. ಅರ್ಜಿಯೊಂದಿಗೆ ಈ ದಾಖಲೆಗಳ ಝರಾಕ್ಸ್ ಪ್ರತಿಯನ್ನು ಲಗತ್ತಿಸಬೇಕು. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು. ಹಾಗಾಗಿ ರೈತರು ಕೊನೆಯ ದಿನಾಂಕದವರೆಗೆ ಕಾಯದೆ ಬೇಗನೆ ಅರ್ಜಿ ಸಲ್ಲಿಸಿ ಕುರಿ ಮೇಕೆ ಸಾಕಾಣಿಕೆ ಉಚಿತ ತರಬೇತಿಯ ಲಾಭ ಪಡೆದುಕೊಳ್ಳಬಹುದು.
ರೈತರು ಕೃಷಿಯೊಂದಿಗೆ ಕುರಿ, ಮೇಕೆ, ಕೋಳಿ ಸಾಕಾಣಿಕೆಯಂತಹ ಉಪಕಸುಬು ಮಾಡಿ ಜೀವನ ಸಾಗಿಸಬಹುದು. ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಯಾವಾಗ ಕುರಿ ಮೇಕೆ ಸಾಕಾಣಿಕೆ ತರಬೇತಿ ಹಮ್ಮಿಕೊಳ್ಳಲಾಗುವುದು ಎಂಬ ಮಾಹಿತಿ ಪಡೆದು ರೈತರು ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
ಮೇಕೆ ಸಾಕಣೆಯ ಪ್ರಯೋಜನಗಳು
* ಅತ್ಯಂತ ಕಡಿಮೆ ಹೂಡಿಕೆ: ಒಂದು ಗರ್ಭಿಣಿ ಎಮ್ಮೆಯ ವೆಚ್ಚದಲ್ಲಿ ನಾವು 10 ಗರ್ಭಿಣಿ ಮೇಕೆಗಳನ್ನು ಪಡೆಯಬಹುದು.
* ಕಡಿಮೆ ಕೂಲಿ ಆವಶ್ಯಕತೆ: ಮೇಯಿಸುವ ಪದ್ಧತಿಯಲ್ಲಿ 30-40 ಮೇಕೆಗಳು ಮತ್ತು * ಸ್ಟಾಲ್ ಫೀಡಿಂಗ್ ಅಡಿಯಲ್ಲಿ 40-80 ಮೇಕೆಗಳನ್ನು ಒಬ್ಬ ವ್ಯಕ್ತಿ ಸಾಕಬಹುದು. ಇತರೆ ಪ್ರಾಣಿ ಸಾಕಾಣಿಕೆಗೆ ಹೋಲಿಸಿದರೆ ಮೇಕೆ ಸಾಕಾಣಿಕೆಗೆ ಕಡಿಮೆ ಕಾರ್ಮಿಕರ ಅಗತ್ಯವಿದೆ.
* ಚೆವೊನ್: ಚೆವೊನ್ ಇತರ ಮಾಂಸಗಳಿಗೆ ಹೋಲಿಸಿದರೆ ಕಡಿಮೆ ಕೊಬ್ಬನ್ನು ಹೊಂದಿರುವ, ಹೆಚ್ಚಿನ ಜೈವಿಕ ಮೌಲ್ಯದೊಂದಿಗೆ ಪ್ರೋಟೀನ್ ಹೊಂದಿರುವ, ಯಾವುದೇ ನಿಷೇಧವನ್ನು ಹೊಂದಿಲ್ಲ ಮತ್ತು ಎಲ್ಲಾ ಸಮುದಾಯದ ಜನರು ಸೇವಿಸುತ್ತಾರೆ. ಹೆಚ್ಚಿನ ಪೌಷ್ಠಿಕಾಂಶ ಮತ್ತು ರುಚಿಯಿಂದಾಗಿ ಇದು ದಿನದಿಂದ ದಿನಕ್ಕೆ ಹೆಚ್ಚು ಬೇಡಿಕೆಯನ್ನು ಪಡೆಯುತ್ತಿದೆ.
* ಹಾಲು: ಮೇಕೆ ಹಾಲು ಹೆಚ್ಚು ಪೌಷ್ಟಿಕವಾಗಿದೆ, ಹೆಚ್ಚು ಘನವಸ್ತುಗಳನ್ನು ಹೊಂದಿರುತ್ತದೆ, ಸುಲಭವಾಗಿ ಜೀರ್ಣವಾಗುವ ಮತ್ತು ಇತರ ಜಾತಿಗಳಿಗೆ ಹೋಲಿಸಿದರೆ ಕಡಿಮೆ ಅಲರ್ಜಿ. ಮೇಕೆ ಹಾಲನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಮತ್ತು ವಾಣಿಜ್ಯ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಮೆಟ್ರೋ ನಗರಗಳು ಹಾಲಿನ ಮಾರುಕಟ್ಟೆಗೆ ಉತ್ತಮ ಸ್ಥಳವಾಗಿದೆ.
ಈ ಸುದ್ದಿ ಓದಿ:- HSRP ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ಇನ್ಮುಂದೆ ದಂಡ ಗ್ಯಾರಂಟಿ.! ಮೊಬೈಲ್ ಮೂಲಕವೇ HSRP ನಂಬರ್ ಪ್ಲೇಟ್ ಪ
ಡೆಯುವ ವಿಧಾನ.! ನಿಮ್ಮ ಮನೆ ಬಾಗಿಲಿಗೆ ಬರಲಿದೆ.!
* ಮೇಕೆ ಗೊಬ್ಬರ: ದನ ಮತ್ತು ಎಮ್ಮೆ ಗೊಬ್ಬರಕ್ಕೆ ಹೋಲಿಸಿದರೆ ಮೇಕೆ ಗೊಬ್ಬರದಲ್ಲಿ 2.5 ಪಟ್ಟು ಹೆಚ್ಚು ಸಾರಜನಕ ಮತ್ತು ರಂಜಕವಿದೆ. ಹಾಗಾಗಿ ಕೃಷಿ ಮತ್ತು ತೋಟಗಾರಿಕೆ ರೈತರು ಮೇಕೆ ಗೊಬ್ಬರದ ಮೇಲೆ ಹೆಚ್ಚು ನಂಬಿಕೆ ಇಟ್ಟಿದ್ದಾರೆ.
* ವಿವಿಧೋದ್ದೇಶ ಪ್ರಾಣಿ: ಮೇಕೆ ಹಾಲು, ಮಾಂಸ, ಚರ್ಮ, ಗೊಬ್ಬರ ಮತ್ತು ಮರಿಗಳನ್ನು ಉತ್ಪಾದಿಸುತ್ತದೆ.
* ಹೆಚ್ಚಿನ ಸಮೃದ್ಧತೆ: ಮೇಕೆ ಇತರ ದೇಶೀಯ ಪ್ರಾಣಿ ಜಾತಿಗಳಿಗೆ ಹೋಲಿಸಿದರೆ ಅಸಾಧಾರಣ ಸಂತಾನೋತ್ಪತ್ತಿ ಸಾಮರ್ಥ್ಯವನ್ನು ಹೊಂದಿದೆ, ವರ್ಷಕ್ಕೆ ಎರಡು ಬಾರಿ ಕಿಡ್ಡಿಂಗ್ ಮತ್ತು ಅವಳಿ ಮತ್ತು ತ್ರಿವಳಿಗಳು ಮೇಕೆಗಳಲ್ಲಿ ಸಾಮಾನ್ಯವಾಗಿದೆ.
* ಸುಲಭವಾಗಿ ಮಾರಾಟ ಮಾಡಬಹುದು: ಮೇಕೆ ಹಾಲು, ಮಾಂಸ, ಮರಿ ಮತ್ತು ಗೊಬ್ಬರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.
* ಹಿಂಬಾಲಿಸಲು ಸುಲಭ: ಅವರು ಹೆಚ್ಚಿನ ಪೋಷಣೆಯನ್ನು ಬೇಡುವುದಿಲ್ಲ, ಕಡಿಮೆ ಗುಣಮಟ್ಟದ ಫೀಡ್ ಮತ್ತು ಮೇವಿನೊಂದಿಗೆ ಅವರು ಬದುಕುಳಿಯುತ್ತಾರೆ ಮತ್ತು ಸಂತಾನೋತ್ಪತ್ತಿ ಮಾಡುತ್ತಾರೆ.
* ಆಡುಗಳು ವಿಧೇಯ, ಉತ್ತಮ ಸ್ವಭಾವ, ಸಹಕಾರಿ, ಸುಲಭವಾಗಿ ನಿರ್ವಹಿಸಬಹುದಾದ ಪ್ರಾಣಿಗಳು. ಆದ್ದರಿಂದ ಮಹಿಳೆಯರು ಸುಲಭವಾಗಿ ಮೇಕೆಗಳನ್ನು ಸಾಕಬಹುದು.