ಭಾರತದ ಪ್ರತಿಯೊಬ್ಬ ವ್ಯಕ್ತಿಯು ಈ ದೇಶದ ಪ್ರಜೆ ಎನಿಸಿಕೊಳ್ಳಲು ಕೆಲವು ದಾಖಲೆಗಳನ್ನು ಹೊಂದಿರಬೇಕು. ಅದಕ್ಕಾಗಿ ನಾವು ಆಧಾರ್ ಕಾರ್ಡ್ (Aadhaar Card), ಪಾನ್ ಕಾರ್ಡ್ (PAN Card), ಓಟರ್ ಐಡಿ ಹೀಗೆ ಕೆಲವೊಂದು ದಾಖಲೆಗಳನ್ನು ಹೊಂದಿರುವುದು ಅನಿವಾರ್ಯ ಇದೇ ಸಾಲಿಗೆ ಪಡಿತರ ಚೀಟಿಯು ಸೇರುತ್ತದೆ ಪಡಿತರ ಚೀಟಿಯಲ್ಲಿಯಲ್ಲಿ ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
ಎಪಿಎಲ್ ಪಡಿತರ ಚೀಟಿ (APL Card), ಬಿಪಿಎಲ್ ಪಡಿತರ ಚೀಟಿ (BPL Ration card) ಎಂದು ವಿಭಾಗಿಸಲಾಗಿದೆ. ಆಧಾರ್ ಕಾರ್ಡ್ ಪಡಿತರ ಚೀಟಿ ಲಿಂಕ್ ಮಾಡಲು ಸರ್ಕಾರ ಸೂಚಿಸಿತ್ತು. ಆದರೂ ಕೆಲವೊಬ್ಬರು ಇಲ್ಲಿಯವರೆಗೂ ಲಿಂಕ್ ಮಾಡಿಸಿಕೊಂಡಿಲ್ಲ. ಇದೀಗ ಕೊನೆಯ ಅವಕಾಶ ನೀಡಿದೆ.
ಈ ಸುದ್ದಿ ತಪ್ಪದೆ ಓದಿ :- ʻಗೃಹಜ್ಯೋತಿʼ ಫಲಾನುಭವಿಗಳಿಗೆ ಸರ್ಕಾರದಿಂದ ಮಹತ್ವದ ಘೋಷಣೆ.!
ಪ್ರಸ್ತುತ ಎಲ್ಲ ಪ್ರಮುಖ ದಾಖಲೆಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದನ್ನು ಸರ್ಕಾರವು ಕಡ್ಡಾಯಗೊಳಿಸುತ್ತಿದೆ. ಆಧಾರ್ ಲಿಂಕ್ ಮಾಡದಿದ್ದರೆ ದಾಖಲೆಗಳು ನಿಷ್ಕ್ರಿಯವಾಗಲಿದೆ ಎಂದು ವರದಿಯು ಆಗಿದೆ. ಇನ್ನು ನಮ್ಮ ಪ್ರಮುಖ ದಾಖಲೆಗಳಲ್ಲಿ ರೇಷನ್ ಕಾರ್ಡ್ ಕೂಡಾ ಒಂದಾಗಿದೆ. ಸರ್ಕಾರದಿಂದ ಸಬ್ಸಿಡಿ ಆಧಾರಿತವಾಗಿ ಅಕ್ಕಿ, ಧಾನ್ಯ, ಸೀಮೆ ಎಣ್ಣೆಯನ್ನು ರೇಷನ್ ಕಾರ್ಡ್ ಮೂಲಕ ಪಡೆಯಲು ಸಾಧ್ಯವಾಗುತ್ತದೆ. ಸುಮಾರು ಐದು ದಶಕಗಳ ಹಿಂದೆಯೇ ಈ ರೇಷನ್ ಕಾರ್ಡ್ ಅನ್ನು ಅಂದಿನ ಸರ್ಕಾರವು ಪರಿಚಯಿಸಿದೆ. ಈಗ ರೇಷನ್ ಕಾರ್ಡ್‌ಗೆ ನೀವು ಆಧಾರ್ ಲಿಂಕ್ ಮಾಡಬೇಕಾಗಿದೆ.
ಎಲ್ಲಿಯವರೆಗೆ ಅವಕಾಶ ಇದೆ?
ಆಧಾರ್ ಕಾರ್ಡ್ಗೆ ಪಡಿತರ ಚೀಟಿ ಲಿಂಕ್ ಮಾಡುವ ಗಡುವನ್ನು ರಾಜ್ಯ ಸರ್ಕಾರವು ಫೆ. 28ರವರೆಗೆ ವಿಸ್ತರಣೆ ಮಾಡಿದೆ. ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಲು ಇ-ಕೆವೈಸಿ ಮಾಡಿಸಬೇಕು. ಮತ್ತು ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆ ಸೇರಿಸಲು ಫೆ.28ರ ವರೆಗೆ ಅವಕಾಶ ನೀಡಲಾಗಿದೆ. ಈ ಕುರಿತು ರಾಜ್ಯ ಸರ್ಕಾರದ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ.
ಇದುವರೆಗೂ ಆಧಾರ್ ಕಾರ್ಡ್ಗೆ ಪಡಿತರ ಕಾರ್ಡ್ ಲಿಂಕ್ ಮಾಡದ ಹಾಗೂ ಇ-ಕೆವೈಸಿ (E KYC) ಮಾಡಿಸಿಕೊಳ್ಳದ ಗ್ರಾಹಕರಿಗಾಗಿ ಕೊನೆಯ ಅವಕಾಶವನ್ನು ಸರ್ಕಾರ ನೀಡಿದೆ. ಹೀಗಾಗಿ ಜನರಿಗೆ ಒಳ್ಳೆಯದಾಗಲಿ. ಹೆಚ್ಚಿನ ಜನರು ಉಪಯೋಗ ಪಡೆದುಕೊಳ್ಳಲಿ ಎನ್ನುವ ಸಲುವಾಗಿ ರಾಜ್ಯ ಸರ್ಕಾರದ ನಾಗರೀಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ ಈ ಆದೇಶ ಹೊರಡಿಸಿದೆ.
ಪಡಿತರ ವಿತರಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ (transparency) ಇರಬೇಕು ಎನ್ನುವ ಸಲುವಾಗಿ ಇಲಾಖೆಯು ಈ ನಿರ್ಧಾರ ಕೈಗೊಂಡಿದೆ. ಒಂದು ವೇಳೆ ಈ ಬಾರಿಯೂ ಗ್ರಾಹಕರು ತಮ್ಮ ಆಧಾರ್ ಕಾರ್ಡ್ಗೆ ಪಡಿತರ ಕಾರ್ಡ್ ಲಿಂಕ್ ಮಾಡದೇ ಇದ್ದಲ್ಲಿ ಅಂತಹ ಕಾರ್ಡ್ಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗುತ್ತದೆ. ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನಿಬಂಧ ತೆರವು ಮಾಡಲಾಗುವುದು ಎಂದು ಸರ್ಕಾರ ತಿಳಿಸಿದೆ.
ಈ ಸುದ್ದಿ ತಪ್ಪದೆ ಓದಿ :- ನಿಮ್ಮ ಜಮೀನಿನ ಎಲ್ಲಾ ಹಳೆಯ ದಾಖಲೆಗಳ ಬಗ್ಗೆ ನಿಮ್ಮ ಮೊಬೈಲ್‌ನಲ್ಲೇ ಚೆಕ್ ಮಾಡುವ ವಿಧಾನ.!
ಪಡಿತರ ಚೀಟಿಯಲ್ಲಿ ನಮೂದಿಸಲಾದ ಹೆಸರು, ಜನ್ಮದಿನಾಂಕ, ಲಿಂಗವನ್ನು ಆಧಾರ್ ಕಾರ್ಡ್ನಲ್ಲಿ ಇರುವಂತೆಯೇ ಇದೆ ಎನ್ನುವುದನ್ನು ಇ-ಕೆವೈಸಿ ಮಾಡುವುದರಿಂದ ಖಚಿತಪಡುತ್ತದೆ. ಇದರಿಂದ ವ್ಯವಸ್ಥೆಯಲ್ಲಿ ಪಾರದರ್ಶಕತೆ ಬರಲಿದೆ. ಇಲ್ಲಿಯ ವರೆಗೂ ಇ -ಕೆವೈಸಿ ಮಾಡಿಸಿಕೊಳ್ಳದವರು ತಮ್ಮ ಹತ್ತಿರದ ಪಡಿತರ ಅಂಗಡಿಗೆ ಭೇಟಿ ನೀಡಿ ಅಲ್ಲಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು.
ಅಧಿಕಾರಿಗಳು ಸಹ ಯಾವುದೇ ತೊಂದರೆ ನೀಡದೆ, ನೆಪ ಹೇಳದೆ ಗ್ರಾಹಕರಿಗೆ ಕೂಡಲೇ ಇ-ಕೆವೈಸಿ ಮಾಡಿಕೊಡಬೇಕು. ಗ್ರಾಹಕರಿಗೆ ತೊಂದರೆಯಾದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರವು ತಿಳಿಸಿದೆ. ಹಾಗಾಗಿ ಜನರು ಸಹ ಸರ್ಕಾರದ ಸೂಚನೆ ಪಾಲಿಸಿ ಯಾರು ಇದುವರೆಗೂ ಇ-ಕೆವೈಸಿ ಮಾಡಿಸಿಕೊಂಡಿಲ್ಲವೋ ಕೂಡಲೇ ಹೋಗಿ ಮಾಡಿಸಿಕೊಳ್ಳುವುದು ಒಳಿತು. https://epds.hp.gov.in/ ಈ ವೆಬ್ ಸೈಟ್ ನಲ್ಲಿ ಮೊಬೈಲ್ ಸಂಖ್ಯೆ ಅಪ್ಡೇಟ್ ಮಾಡಿಸಬಹುದು.
ರೇಷನ್ – ಆಧಾರ್ ಲಿಂಕಿಂಗ್ ಪ್ರಯೋಜನಗಳು?
ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್ ಜೊತೆ ಲಿಂಕ್ ಮಾಡುವುದರಿಂದ ಆಗುವ ಪ್ರಯೋಜನಗಳ ಬಗ್ಗೆಯೂ ಸರ್ಕಾರ ಈ ಹಿಂದೆಯೇ ಮಾಹಿತಿ ನೀಡಿದೆ. ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿದ ಬಳಿಕ ಯಾವುದೇ ಕುಟುಂಬವು ಒಂದಕ್ಕಿಂತ ಅಧಿಕ ರೇಷನ್ ಕಾರ್ಡ್ ಅನ್ನು ಹೊಂದಲು ಸಾಧ್ಯವಾಗುವುದಿಲ್ಲ.
ಹಾಗೆಯೇ ವಂಚನೆಯ ಪ್ರಕರಣಗಳನ್ನು ಕೂಡಾ ತಡೆಯಲು ಸಾಧ್ಯವಾಗುತ್ತದೆ. ಬಯೋಮೆಟ್ರಿಕ್ ಆಧಾರಿತ ವಿತರಣಾ ವ್ಯವಸ್ಥೆಯು ಆ ಮನೆಯವರಿಗೆ ಮಾತ್ರ ರೇಷನ್ ಪಡೆಯಲು ಸಾಧ್ಯವಾಗುವಂತೆ ಮಾಡುತ್ತದೆ. ಇದರಿಂದ ವಂಚನೆ ತಪ್ಪುತ್ತದೆ. ಪಡಿತರ ಅಂಗಡಿಗಳಲ್ಲಿ ನಡೆಯುವ ಭ್ರಷ್ಟಾಚಾರ ನಡೆಯುವುದನ್ನು ತಡೆಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.
ಈ ಸುದ್ದಿ ತಪ್ಪದೆ ಓದಿ :- ನಿಮಗೆ ಸ್ವಂತ ಮನೆ ಕಟ್ಟಿಕೊಳ್ಳಲು ಕಡಿಮೆ ಬಡ್ಡಿ ದರದಲ್ಲಿ ಗೃಹ ಸಾಲ ನೀಡಲಿವೆ ಈ 5 ಬ್ಯಾಂಕ್‌ಗಳು.! ಎಷ್ಟು ಸಾಲ ಸಿಗುತ್ತೆ, ಬಡ್ಡಿ ಎಷ್ಟು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಮಾಡಲು ಬೇಕಾದ ದಾಖಲೆಗಳು: ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡ್, ಕುಟುಂಬದ ಯಜಮಾನರ ಅಥವಾ ಮುಖ್ಯಸ್ಥರ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್‌ನ ಪಾಸ್‌ಬುಕ್, ಪಾಸ್‌ಪೋರ್ಟ್ ಗಾತ್ರದ ಫೋಟೊ ಬೇಕಾಗುತ್ತದೆ.
ರೇಷನ್ ಕಾರ್ಡ್‌ಗೆ ಆಧಾರ್ ಆನ್‌ಲೈನ್ ಲಿಂಕ್ ಮಾಡುವುದು ಹೇಗೆ?
ಹಂತ 1: ರಾಜ್ಯದ ಪಿಡಿಎಸ್ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
ಹಂತ 3: ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
ಹಂತ 4: ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
ಹಂತ 5: ಎಲ್ಲ ಮಾಹಿತಿ ಹಾಕಿದ ಬಳಿಕ submit ಮೇಲೆ ಕ್ಲಿಕ್ ಮಾಡಿ.
ಹಂತ 6: ನಿಮ್ಮ ರಿಜಿಸ್ಟಾರ್ ಆದ ಮೊಬೈಲ್ ಸಂಖ್ಯೆಗೆ ಒಟಿಪಿ ಬರಲಿದೆ.
ಹಂತ 7: ಒಟಿಪಿಯನ್ನು ನಮೂದಿಸಿ, ಇದಾದ ಬಳಿಕ ನಿಮ್ಮ ಪ್ರಕ್ರಿಯೆ ಪೂರ್ಣವಾದ ಬಗ್ಗೆ ಎಸ್‌ಎಂಎಸ್ ಬರಲಿದೆ.
ಆಫ್‌ಲೈನ್ ಲಿಂಕ್ ಮಾಡುವುದು ಹೇಗೆ?
ಹಂತ 1: ಎಲ್ಲ ಅಗತ್ಯ ದಾಖಲೆಗಳ ಪ್ರತಿಯನ್ನು ಇಟ್ಟುಕೊಳ್ಳಿ, ಒರಿಜಿನಲ್ ದಾಖಲೆ ಕೂಡಾ ಇರಲಿ.
ಹಂತ 2: ಎಲ್ಲ ದಾಖಲೆಯೊಂದಿಗೆ ರೇಷನ್ ಅಂಗಡಿ ಅಥವಾ ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಸೆಂಟರ್ (ಪಿಡಿಎಸ್) ಗೆ ಭೇಟಿ ನೀಡಿ.
ಹಂತ 3: ಪಿಡಿಎಸ್ ಅಥವಾ ರೇಷನ್ ಅಂಗಡಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ.
ಹಂತ 4: ಫಿಂಗರ್‌ಪ್ರಿಟ್ ಅಥೆಂಟಿಫಿಕೇಷನ್ ಮೂಲಕ ಆಧಾರ್ ಪರಿಶೀಲಿಸಲಾಗುತ್ತದೆ.
ಹಂತ 5: ಈ ಪ್ರಕ್ರಿಯೆ ಮುಗಿದ ಬಳಿಕ ದಾಖಲೆ ಸಲ್ಲಿಸಿದ ಬಗ್ಗೆ ನಿಮಗೆ ಎಸ್‌ಎಂಎಸ್ ಲಭ್ಯವಾಗಲಿದೆ.
ಹಂತ 6: ಅದಾದ ಬಳಿಕ ರೇಷನ್ ಕಾರ್ಡ್‌ಗೆ ಆಧಾರ್ ಲಿಂಕ್ ಆದ ಬಗ್ಗೆ ಎಸ್‌ಎಂಎಸ್ ಬರಲಿದೆ.