ಸಾಮಾನ್ಯವಾಗಿ ತಿಳಿದಿರುವ ಹಾಗೆ ಆಸ್ತಿಯ ಒಡೆಯ ಮ’ರ’ಣ ದ ನಂತರ ಕುಟುಂಬದ ಸದಸ್ಯರು ಅವರ ಹೆಸರಿಗೆ ಖಾತೆಯನ್ನು ಬದಲಾವಣೆ ಮಾಡಿಕೊಳ್ಳುತ್ತಾರೆ ಕೆಲವೊಂದು ಸಂದರ್ಭದಲ್ಲಿ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಾವಣೆ ಮಾಡಿಕೊಳ್ಳೋದಿಲ್ಲ.
ಯಾವ ಕಾರಣಕ್ಕಾಗಿ ಆಸ್ತಿಯನ್ನು ಬದಲಾವಣೆ ಮಾಡಿಕೊಳ್ಳುವುದಿಲ್ಲ ಎಂದರೆ ಇದಕ್ಕೆ ಹಲವಾರು ರೀತಿಯ ಕಾರಣಗಳನ್ನು ನಾವು ನೋಡುತ್ತೇವೆ. 1 ಕುಟುಂಬದಲ್ಲಿ ಒಡಕು 2. ಬಹು ಪತ್ನಿತ್ವ 3. ಭೂವಿವಾದ 4. ತಿಳುವಳಿಕೆಯ ಕೊರತೆ ಈ ಕಾರಣದಿಂದಾಗಿ ಹಲವು ಕಡೆಯಲ್ಲಿ ಆಸ್ತಿಯ ಒಡೆಯ ಮ’ರ’ಣ ದ ನಂತರವೂ ಕೂಡ ಕುಟುಂಬದ ಸದಸ್ಯರು ಅವರ ಹೆಸರಿಗೆ ಖಾತೆಯನ್ನು ಬದಲಾವಣೆ ಮಾಡಿಕೊಳ್ಳುವುದಿಲ್ಲ
ಆದರೆ ಇದಕ್ಕೆ ಸರ್ಕಾರ ಏನು ಉತ್ತರಿಸುತ್ತದೆ ಎಂದು ನೋಡುವುದಾದರೆ ಸರ್ಕಾರದ ನಿಯಮದ ಪ್ರಕಾರವಾಗಿ ಕುಟುಂಬದ ಮಾಲೀಕ ಮ’ರ’ಣ ಹೊಂದಿದ ಆರು ತಿಂಗಳ ಒಳಗೆ ಖಾತೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸುತ್ತದೆ. ಜಮೀನಿನ ಮಾಲೀಕ ಮ’ರ’ಣ ಹೊಂದಿದ ನಂತರ ಹೇಗೆ ತಮ್ಮ ಹೆಸರಿಗೆ ಖಾತೆಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂಬ ಅರಿವು ಸಾಕಷ್ಟು ಜನರಲ್ಲಿ ಇರುವುದಿಲ್ಲ ಯಾವ ಮುಖಾಂತರವಾಗಿ ಆಸ್ತಿಯನ್ನು ತಮ್ಮ ಹೆಸರಿಗೆ ಬದಲಾಯಿಸಿಕೊಳ್ಳಬೇಕು ಎಂದು ನೋಡುವುದಾದರೆ
ಮ’ರ’ಣ ಹೊಂದಿದ ನಂತರ ಮನೆಯ ಸದಸ್ಯರು ಪೌತಿ ಖಾತೆಯನ್ನು ಮಾಡಿಸಿಕೊಳ್ಳಬೇಕು ಸಾಕಷ್ಟು ಜನರಲ್ಲಿ ಪೌತಿ ಖಾತೆ ಎಂದರೇನು ಎಂಬ ಅರಿವು ಇರುವುದಿಲ್ಲ ಪೌತಿ ಖಾತೆ ಎಂದರೆ ಮ’ರ’ಣ ಹೊಂದಿದ ಖಾತೆದಾರರ ಹೆಸರು ತೆಗೆದು, ದಾಖಲೆಯಲ್ಲಿ ಮ’ರ’ಣ ಹೊಂದಿದ ವ್ಯಕ್ತಿಯ ಹೆಸರು ತೆಗೆದು ಕುಟುಂಬದ ಎಲ್ಲಾ ಸದಸ್ಯರು ಅಂದರೆ ನೇರ ವಾರಸುದಾರರು ಖಾತೆ ಬದಲಾವಣೆ ಮಾಡಿಕೊಳ್ಳುವುದನ್ನು ಪೌತಿ ಖಾತೆ ಎಂದು ಕರೆಯಲಾಗುತ್ತದೆ. ನೇರ ವಾರಸುದಾರರು ಯಾರಾಗುತ್ತಾರೆ ಎಂದರೆ ತಾಯಿ, ಹೆಂಡತಿ, ಮತ್ತು ಆತನ ಮಕ್ಕಳು ಜಮೀನಿನ ಮಾಲೀಕರಿಗೆ ನೇರ ವಾಸುದಾರರಾಗುತ್ತಾರೆ ಪೌತಿ ಖಾತೆಯನ್ನು ಒಬ್ಬರ ಹೆಸರಿನಲ್ಲಿಯೂ ಸಹ ಹಕ್ಕು ಬದಲಾವಣೆ ಮಾಡಿಕೊಳ್ಳಬಹುದು.
ಮನೆಯಲ್ಲಿ ಇರುವಂತಹ ಎಲ್ಲಾ ಸದಸ್ಯರ ಒಪ್ಪಿಗೆಯ ಮೇರೆಗೆ ಪತ್ರಕ್ಕೆ ಸಹಿ ಹಾಕಿಸಿಕೊಂಡ ಒಬ್ಬರ ಹೆಸರಿಗೆ ಹಕ್ಕು ಬದಲಾವಣೆಯನ್ನು ಮಾಡಿಕೊಳ್ಳಬಹುದು. ಪೌತಿಕತೆಯನ್ನು ಯಾವ ಕಾರಣಕ್ಕಾಗಿ ಮಾಡಿಸುತ್ತಾರೆ ಎಂಬಂತಹ ಮುಖ್ಯ ಕಾರಣ ಎಂದರೆ ಕಂದಾಯ ವಸೂಲಿಗಾಗಿ ಹಾಗೂ ಇನ್ನಿತರ ಸೌಲಭ್ಯವನ್ನು ಪಡೆದುಕೊಳ್ಳಲು ಮಾತ್ರ ಪೌತಿ ಖಾತೆಯಲ್ಲಿ ಜಮೀನನ್ನು ವರ್ಗಾವಣೆ ಮಾಡಿಕೊಳ್ಳಲಾಗುತ್ತದೆ
ಪೌತಿ ಖಾತೆ ಮಾಡಿಸಿಕೊಂಡ ನಂತರ ಜಮೀನಿಗಾಗಿ 11E sketch ಸಲ್ಲಿಸಬೇಕು ಇದಕ್ಕಾಗಿ ಜಮೀನಿನ ಎಲ್ಲಾ ಪಾಲುದಾರರ ಆಧಾರ್ ಕಾರ್ಡ್ ಹಾಗೂ ಜಮೀನಿನ ಎಲ್ಲಾ ಪಹಣಿಗಳನ್ನು ತೆಗೆದುಕೊಂಡು 11 ಬಿ ಅರ್ಜಿಯನ್ನು ಭರ್ತಿ ಮಾಡಿ ನಿಮ್ಮ ನಾಡಕಚೇರಿಯಲ್ಲಿ 11E sketch ಗೆ ಅರ್ಜಿಯನ್ನು ಸಲ್ಲಿಸಬೇಕು ಬಹು ಮುಖ್ಯವಾದ ವಿಚಾರ ಏನೆಂದರೆ 11 ಬಿ ಅರ್ಜಿಯಲ್ಲಿ ನೀವು ಯಾವ ಪಾಲುದಾರರಿಗೆ ಎಷ್ಟು ವಿಸ್ತೀರ್ಣದಲ್ಲಿ ಜಮೀನು ವರ್ಗಾವಣೆಯಾಗಬೇಕು ಹಾಗೆ ಯಾವ ದಿಕ್ಕಿನಲ್ಲಿ ಜಮೀನು ಪಾಲು ಬೇಕು ಎಂಬಂತಹ ಸಂಪೂರ್ಣ ಮಾಹಿತಿಯನ್ನು 11ಬಿ ಅರ್ಜಿಯಲ್ಲಿ ಭರ್ತಿ ಮಾಡಿರಬೇಕು.
ನೀವು ಅರ್ಜಿಯನ್ನು ಸಲ್ಲಿಸಿದ ನಂತರ ನಿಗದಿಪಡಿಸಿದ ದಿನಾಂಕದಲ್ಲಿ ಭೂ ಮಾಲೀಕರು ಅರ್ಜಿಯಲ್ಲಿ ಹೇಳಿದಂತೆ ಪ್ರತಿಯೊಂದು ಭಾಗವನ್ನು ಪ್ರತ್ಯೇಕವಾಗಿ ಗುರುತಿಸಿ ಜಮೀನನ್ನು ಅಳತೆ ಮಾಡಿ ಎಲ್ಲಾ ಪಾಲುದಾರರಿಗೆ ಎಷ್ಟು ಜಮೀನು ಬರುತ್ತದೆ ಎಂದು ನಕ್ಷೆಯನ್ನು ರಚಿಸುತ್ತಾರೆ. ಜಮೀನಿನ ನಕ್ಷೆ ರಚಿಸಿದ ನಂತರ 11E sketch ಪೂರ್ಣಗೊಳ್ಳುತ್ತದೆ ನಂತರದಲ್ಲಿ ವಿಭಾಗ ಪತ್ರದ ಮೂಲಕ ಪಾಲುದಾರರ ಹೆಸರಿಗೆ ಹೇಗೆ ಹಂಚಿಕೊಳ್ಳಬೇಕು ಎಂದರೆ ಪಾಲುತಾರರ ಆಧಾರ್ ಕಾರ್ಡ್ ವಂಶಾವಳಿ ಪತ್ರವನ್ನು ತೆಗೆದುಕೊಂಡು ಹೋಗಿ ಉಪನಂದಣಿ ಕಚೇರಿಯಲ್ಲಿ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಅಲ್ಲಿಗೆ ಅರ್ಜಿ ಸಲ್ಲಿಕೆಯ ಪ್ರಕ್ರಿಯೆ ಮುಕ್ತಾಯವಾಗುತ್ತದೆ.
ಕೆಲವು ದಿನಗಳ ನಂತರ ನಿಮ್ಮ ಊರಿಗೆ ಸಂಬಂಧಪಟ್ಟಂತಹ ವಿಲೇಜ್ ಅಕೌಂಟೆಂಟರ್ J from ಗೆ ಸಹಿ ಹಾಕಿಸಿಕೊಳ್ಳುತ್ತಾರೆ ನಂತರ ನಿಮಗೆ ಪಾಲು ಆಗಿರುವಂತಹ ಜಮೀನಿನ ಪಹಣಿ ಬರುತ್ತದೆ ಇಲ್ಲಿಗೆ ಜಮೀನಿನ ಒಡೆಯ ಮ’ರ’ಣ ಹೊಂದಿದ ನಂತರ ಆತನ ಜಮೀನನ್ನು ನೇರ ವಾರಿಸುದಾರರಿಗೆ ಯಾವ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂಬಂತಹ ಸಂಪೂರ್ಣ ಮಾಹಿತಿಯನ್ನು ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ. ಬಹು ಮುಖ್ಯವಾದ ಅಂತಹ ವಿಷಯ ಏನೆಂದರೆ ಜಮೀನಿನ ಮಾಲೀಕ ಮ’ರ’ಣ’ ದ ನಂತರ ಆರು ತಿಂಗಳ ಒಳಗೆ ಕಡ್ಡಾಯವಾಗಿ ಪೌತಿ ಖಾತೆಯ ಮೂಲಕ ಹಕ್ಕನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸರ್ಕಾರವು ಈಗಾಗಲೇ ನಿಯಮವನ್ನು ಹೊರಡಿಸಿದೆ ಇದರ ಅನುಸಾರವಾಗಿ ಪ್ರತಿಯೊಬ್ಬರೂ ಸಹ ಜಮೀನನ್ನು ಪೌತಿ ಖಾತೆಯ ಮೂಲಕ ಪಡೆದುಕೊಳ್ಳಬೇಕು.