ರಾಯರ ಪವಾಡ
ಭಕ್ತಿ ಎನ್ನುವುದು ಎಲ್ಲವನ್ನು ಮೀರಿದ್ದು. ಪ್ರಾಮಾಣಿಕವಾದ ಭಕ್ತಿಗೆ ಭಗವಂತನ ಕೂಡ ಮೆಚ್ಚಿ ಹರಸಲೇಬೇಕು. ದೇವರು, ಧರ್ಮ, ಆಚಾರ, ಭಕ್ತಿ ಇವುಗಳಲ್ಲಿ ನಂಬಿಕೆ ಇಲ್ಲದಿದ್ದವರು ಕೂಡ ಅಚ್ಚರಿ ಪಡುವಂತೆ ಅನೇಕ ಪವಾಡಗಳು ಆಗಾಗ ನಡೆಯುತ್ತಾ ಇರುತ್ತವೆ ಪ್ರಸ್ತುತವಾಗಿ ಕರ್ನಾಟಕದಲ್ಲಿ ನಡೆದ ಎರಡು ಪ್ರಕರಣಗಳ ಉದಾಹರಣೆಯನ್ನು ನಾನಿಲ್ಲಿ ಹೇಳಬಯಸುತ್ತೇನೆ.
ಶ್ರೀರಾಮ ಹಾಗೂ ಶ್ರೀ ಹನುಮನ ಅವಿನಾಭಾವ ಸಂಬಂಧದ ಬಗ್ಗೆ ಇಡೀ ಭಾರತಕ್ಕೆ ತಿಳಿದಿದೆ. ನಿಷ್ಕಲ್ಮಶ ಭಕ್ತಿಯಿಂದ ಸೇವಾ ಮನೋಭಾವದಿಂದ ರಾಮನ ಸ್ಮರಣೆ ಮಾಡಿದ ಹನುಮ ಜನಿಸಿದ ನಮ್ಮ ಕರುನಾಡಿನ ಶಿಲ್ಪಿ ತಯಾರಿಸಿದ ರಾಮನ ಮೂರ್ತಿಗೂ ಅಯೋಧ್ಯೆಯಲ್ಲಿ ಪ್ರತಿಷ್ಠಾಪನೆಯಾಗಿಲು ಆಯ್ಕೆಯಾಗಿದೆ ಎಂದರೆ ಭಕ್ತಿಗೆ ಭಗವಂತನ ಇರುವಿಕೆಗೆ ಇದಕ್ಕಿಂತ ಸಾಕ್ಷಿ ಬೇಕೆ.
ಈ ಮಟ್ಟದ ಅರ್ಪಣೆ ಭಗವಂತನಲ್ಲಿ ಇದ್ದವರಿಗೆ ಖಂಡಿತ ಆತನ ಕರುಣೆ ಇದ್ದೇ ಇರುತ್ತದೆ. ಇದೇ ರೀತಿಯಾಗಿ ನಮ್ಮ ನಾಡಿನ ಜನರು ಭಕ್ತಿಯಿಂದ ಪೂಜಿಸುವ ಅನೇಕ ದೇವರು ಹಾಗು ದೇವತೆಗಳಲ್ಲಿ ಗುರುರಾಯರು ಕೂಡ ಒಬ್ಬರಾಗಿ ನಮ್ಮ ಬದುಕಿನ ಭಾಗವಾಗಿ ಬಿಟ್ಟಿದ್ದಾರೆ. ಶ್ರೀ ಗುರು ರಾಘವೇಂದ್ರ ಮಹಾತ್ಮೆಯನ್ನು ಪವಾಡವನ್ನು ಕಂಡು ಕೇಳರಿಯದವರು ಇಲ್ಲವೇ ಇಲ್ಲ ಎನ್ನಬಹುದು.
ಈ ಕಾರಣಕ್ಕಾಗಿ ಪ್ರತಿನಿತ್ಯ ಮಂತ್ರಾಲಯದ ಬೃಂದಾವನವಸ್ಥೆಯಲ್ಲಿರುವ ಶ್ರೀ ಗುರುರಾಯನ ದರ್ಶನ ಮತ್ತು ಆಶೀರ್ವಾದ ಪಡೆಯುವುದಕ್ಕೆ ತೆರಳುತ್ತಿರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹದ್ದೇ ಪವಾಡ ಚಿತ್ರದುರ್ಗದ ರಾಯರ ಮಠದಲ್ಲೂ ಕೂಡ ನಡೆದಿದ್ದು ಈಗ ಈ ಪವಾಡಕ್ಕೆ ಇಡೀ ಕರುನಾಡೇ ಸಾಕ್ಷಿಯಾಗಿದೆ.
ಘಟನೆ ನಡೆದು ವಾರವಾಗಿದ್ದರು ಕೂಡ ಇನ್ನು ಸಹ ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ಚರ್ಚೆಯಲ್ಲಿದ್ದು ವಿಜ್ಞಾನ ಲೋಕಕ್ಕೆ ಸವಾಲೆಸೆದಿರುವ ಈ ಘಟನೆ ನಾಸ್ತಿಕರ ಬಾಯಿ ಮುಚ್ಚಿಸಿದೆ ಎಂದೇ ಹೇಳಬಹುದಾಗಿದೆ. ಅಷ್ಟಕ್ಕೂ ನಡೆದಿದ್ದು ಏನು ಎಂದರೆ ಬೆಂಗಳೂರಿನ ಯಲಹಂಕ ಮೂಲದ ಶ್ರೀಧರ್ ಎನ್ನುವ ವ್ಯಕ್ತಿ ಮತ್ತು ಆತನ ಪತ್ನಿ ಜೊತೆಗೆ ಇಬ್ಬರು ಮಕ್ಕಳು ಶಿವಮೊಗ್ಗದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದರು.
ದಂಪತಿಗಳಿಗೆ ಇಬ್ಬರ ಮಕ್ಕಳಿದ್ದು, ದು’ರಾ’ದೃ’ಷ್ಟ’ವಶಾತ್ ಮಕ್ಕಳಿಬ್ಬರು ಅಂಗ ವೈಫಲ್ಯದಿಂದ ಬಳಲುತ್ತಿದ್ದಾರೆ. ಅದರಲ್ಲೂ ಮಗಳು ತೇಜಸ್ವಿನಿ 19 ವರ್ಷ ವಯಸ್ಸಿನವಳಾಗಿದ್ದು ಕಳೆದ ಆರು ತಿಂಗಳಿಂದ ಹೃದಯ ಸಂಬಂಧಿತ ಸಮಸ್ಯೆಯಿಂದ ಕಾಲು ಸ್ವಾಧೀನ ಕಳೆದುಕೊಂಡು ವೀಲ್ ಚೇರ್ ನಲ್ಲಿ ಓಡಾಡುವಂತಾಗಿದೆ. ಮತ್ತೊಬ್ಬರ ಸಹಾಯವಿಲ್ಲದೆ ಹೆಜ್ಜೆ ಕೂಡ ಇಡಲಾಗದ ದು’ಸ್ತಿ’ತಿಯಲ್ಲಿದ್ದ ತೇಜಸ್ವಿನಿ ರಾಯರ ದರ್ಶನ ಮಾಡಲು ಬಯಸಿದ್ದಾಳೆ.
ಕುಟುಂಬದವರು ಒಟ್ಟಿಗೆ ಚಿತ್ರದುರ್ಗದಲ್ಲಿರುವ ರಾಯರ ಮಠಕ್ಕೆ ಭೇಟಿ ಕೊಟ್ಟು ಶ್ರೀರಾಯರು ವೆಂಕಣ್ಣಗೆ ಮೋಕ್ಷ ಕೊಟ್ಟ ಸ್ಥಳ ಹಾಗೂ ಶ್ರೀರಾಯರ ಚಲ ಬೃಂದಾವನ ದರ್ಶನವನ್ನು ಮಾಡಿದ್ದಾರೆ. ಅಮ್ಮ ಪ್ರದಕ್ಷಿಣೆ ಹಾಕಿದ್ದನ್ನು ನೋಡುತ್ತಿದ್ದ ತೇಜಸ್ವಿನಿಗೆ ತಾನು ಕೂಡ ಪ್ರದಕ್ಷಣೆ ಆಗಬೇಕು ಎಂದು ಮನಸ್ಸಾಗಿದೆ. ಹಾಗಾಗಿ ಅಮ್ಮನನ್ನು ಕೇಳುತ್ತಾಳೆ.
ಎಲ್ಲ ಭಾರವನ್ನು ರಾಯರ ಮೇಲೆ ಹಾಕಿ ಮಗಳನ್ನು ಹೆಜ್ಜೆ ಹಾಕಿಸಲು ಪ್ರಯತ್ನ ಪಟ್ಟ ಅಮ್ಮನಿಗೆ ನಿಲ್ಲಲು ಆಗದೆ ಕಳೆದ ಆರು ತಿಂಗಳಿಂದ ನರಳುತ್ತಿದ್ದ ಮಗಳು ಏಕಾಏಕಿ ನಡೆದಾಡುತ್ತಿದ್ದಾಳೆ ಎನ್ನುವುದು ಅಪಾರ ಸಂತೋಷ ಹಾಗೂ ಅಷ್ಟೇ ಆಶ್ಚರ್ಯವನ್ನುಂಟು ಮಾಡಿದೆ. ನಡೆಯಲಾಗದೇ ನೋ’ವಿನಲ್ಲಿದ್ದ ತೇಜಸ್ವಿನಿ ಮೂರು ಪ್ರದಕ್ಷಿಣೆಯನ್ನು ಹಾಕಿದ್ದಾಳೆ.
ಈ ಘಟನೆ ಕುಟುಂಬವನ್ನು ಮಾತ್ರವಲ್ಲದೆ ಅಂದು ಅಲ್ಲಿ ನೆರೆದಿದ್ದ ಎಲ್ಲರಿಗೂ ಅಚ್ಚರಿ ಉಂಟು ಮಾಡಿದೆ. ಗುರು ರಾಯರ ಪವಾಡವನ್ನು ಮೆಚ್ಚಿಕೊಂಡಾಡುವಂತೆ ಮಾಡಿದೆ. ರಾಯರ ದರ್ಶನ ಮಾಡಿದ ತೇಜಸ್ವಿನಿ ಸ್ವಾಧೀನ ಕಳೆದುಕೊಂಡಿದ್ದ ತನ್ನ ಕಾಲುಗಳಿಗೆ ಮತ್ತೆ ಸತ್ವ ಪಡೆದು ರಾಯರ ಆಶೀರ್ವಾದ ಪಡೆದಿದ್ದಾರೆ.
ನಂಬಿದವರನ್ನು ಗುರುರಾಯರು ಕೈ ಬಿಡುವುದಿಲ್ಲ ಎನ್ನುವುದಕ್ಕೆ ಈ ಘಟನೆ ಮತ್ತೊಂದು ಉದಾಹರಣೆಯಾಗಿದ್ದು ನೀವು ಕೂಡ ಇದೇ ರೀತಿಯಾಗಿ ಭಗವಂತನ ಸಾಕ್ಷಾತ್ಕಾರ ಅನುಭವಿಸಿರುವ ಉದಾಹರಣೆಗಳಿದ್ದರೆ ತಪ್ಪದೇ ಕಮೆಂಟ್ ಮೂಲಕ ಹಂಚಿಕೊಳ್ಳಿ.