ಅನ್ನದಾತ ರೈತರಿಗೆ ಭರ್ಜರಿ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ… ಕೃಷಿ ಸಾಲದ ಬಡ್ಡಿ ಸಂಪೂರ್ಣ ಮನ್ನಾ.!

WhatsApp Group Join Now
Telegram Group Join Now

ರಾಜ್ಯದಲ್ಲಿ ಈ ಬಾರಿ ಮುಂಗಾರು ಹಾಗೂ ಹಿಂಗಾರು ಮಳೆ, ಬೆಳೆ ಅಭಾವದಿಂದ ರೈತರು ಸಾಕಷ್ಟು ಕಷ್ಟ ಪಡುವಂತೆ ಆಗಿದೆ. ಹಾಗಾಗಿ ರಾಜ್ಯದ ಯಾವುದೇ ಅಣೆಕಟ್ಟುಗಳು ಭರ್ತಿಯಾಗಿಲ್ಲ. ಈ ಬಾರಿ ಬೇಸಿಗೆಗೆ ಕುಡಿಯುವ ನೀರಿಗೂ ತತ್ವಾರ ಎದುರಾಗುವ ಸಾಧ್ಯತೆ ಇದೆ. ಅಲ್ಲದೆ ಈ ಬಾರಿ ರೈತರು ಭಿತ್ತಿದ ಬೆಳೆಗಳೆಲ್ಲ ಒಣಗಿ ಹೋಗಿದೆ.

ಇದರಿಂದ ರೈತರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಸರ್ಕಾರವು ರಾಜ್ಯದ ಸಾಕಷ್ಟು ಪ್ರದೇಶಗಳನ್ನು ಬರಪೀಡಿತ ಪ್ರದೇಶ ಎಂಬುದಾಗಿ ಘೋಷಿಸಿದ್ದು, ಈ ಎಲ್ಲಾ ಸ್ಥಳಗಳಲ್ಲಿಯೂ ಸಹ ವಾಸಿಸುವ ಆ ರೈತರಿಗೆ ಬರ ಪರಿಹಾರವನ್ನು ಕೂಡ ಘೋಷಿಣೆಯನ್ನು ಮಾಡಿದ್ದಾರೆ.

ಹೌದು, ರೈತರು ಕೃಷಿಗಾಗಿ ತೆಗೆದುಕೊಂಡಿದ್ದ ಸಾಲ (Loan) ತೀರಿಸುವುದು ಹೇಗೆ ಎನ್ನುವ ಯೋಚನೆಯಲ್ಲಿದ್ದಾರೆ. ರೈತರ ಕಷ್ಟ ಅರಿತಿರುವ ಸರ್ಕಾರವು ರೈತರ ಕೃಷಿಗಾಗಿ ತೆಗೆದುಕೊಂಡಿದ್ದ ಸಾಲದ (Loan) ಮೇಲಿನ ಬಡ್ಡಿ ಮನ್ನಾ ಮಾಡಲು ನಿರ್ಧಾರ ಮಾಡಿದೆ. ಇದರ ಜೊತೆಗೆ ರೈತರಿಗೆ ಬೆಳೆಹಾನಿ ಪರಿಹಾರ ನೀಡಲಾಗುವುದು ಎಂದು ತಿಳಿಸಿದೆ.

ಈ ಸುದ್ದಿ ಓದಿ:- ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇದ್ದವರಿಗೆ RBI ನಿಂದ ಹೊಸ ರೂಲ್ಸ್ ಜಾರಿ.!

ಈ ಬಾರಿ ರಾಜ್ಯದಲ್ಲಿ 210 ತಾಲೂಕುಗಳು ಬರಗಾಲ ಪೀಡಿತವಾಗಿದೆ ಎಂದು ಸರ್ಕಾರ ತಿಳಿಸಿದೆ. ಇದಕ್ಕಾಗಿ ಕೇಂದ್ರ ಸರ್ಕಾರದ ಅಧಿಕಾರಿಗಳು ಸಹ ಬಂದು ಪರಿಶೀಲನೆ ಮಾಡಿ ತೆರಳಿದ್ದಾರೆ. ರೈತರು ಬಹಳ ನಷ್ಟ ಅನುಭವಿಸಿದ್ದಾರೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಲ್ಲ ರಾಷ್ಟ್ರೀಯ ಹಾಗೂ ಸಹಕಾರಿ ಬ್ಯಾಂಕ್ ಅಧಿಕಾರಿಗಳ ಸಭೆ ನಡೆಸಿ ಈ ಬಾರಿ ಯಾರೂ ಕೂಡ ರೈತರಿಗೆ ಸಾಲ ಮರುಪಾವತಿ (Loan Re Payment) ಮಾಡಲು ನೋಟೀಸ್ ನೀಡದಂತೆ ಸೂಚನೆ ನೀಡಿದ್ದಾರೆ.

ಹೌದು, ಇದೊಂದು ರೈತರಿಗೆ ಮತ್ತೊಂದು ಗುಡ್ ನ್ಯೂಸ್ ಅಂತಾನೇ ಹೇಳ್ಬೋದು. ಈ ವರ್ಷದ ಕೃಷಿ ಸಾಲದ ಬಡ್ಡಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದ್ದು, ರೈತ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಕೃಷಿ ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಲು ಬ್ಯಾಂಕ್ ಗಳಿಗೂ ಕೂಡ ಮನವಿ ಮಾಡಲಾಗಿದೆ.

ರೈತರು ಸಹಕಾರಿ ಬ್ಯಾಂಕುಗಳಲ್ಲಿ ಮಾಡಿರುವಂತಹ ಕೃಷಿ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಈ ಕುರಿತು ಕಳೆದ ವರ್ಷ ಡಿ.8 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿಯೇ ತೀರ್ಮಾನ ಕೈಗೊಳ್ಳಲಾಗಿದ್ದು, ಜನವರಿ 21 ರಂದು ಈ ಕುರಿತು ಅಧಿಕೃತ ಆದೇಶ ಹೊರಬಿದ್ದಿದೆ. ಈ ಬಡ್ಡಿ ಮನ್ನಾ ಯೋಜನೆಯಿಂದ ಸರ್ಕಾರಕ್ಕೆ 44೦.28 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.

ಈ ಸುದ್ದಿ ಓದಿ:- ರೇಷನ್-ಆಧಾರ್ ಕಾರ್ಡ್ ಲಿಂಕ್ ಮಾಡಲು ಈ ದಿನಾಂಕ ಕೊನೆ.! ಇಲ್ಲದಿದ್ರೆ ರೇಷನ್ ಕಾರ್ಡ್ ರದ್ದಾಗಲಿದೆ ಎಚ್ಚರ.!

ಇದೀಗ ಇದಕ್ಕೆ ಕಳೆದ ಗುರುವಾರ ಅನುಮೋದನೆ ಕೂಡ ದೊರಕಿದೆ. ಇದು ರೈತರಿಗೆ ಖುಷಿಯ ವಿಚಾರ. ರೈತರ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದ್ದು, ಇದಕ್ಕೆ ಯಾರೆಲ್ಲ ಅರ್ಹರು ಎಂಬುದನ್ನು ಇಲ್ಲಿ ನೋಡೋಣ ಬನ್ನಿ….

* 2023 ಡಿಸೆಂಬರ್ 31ಕ್ಕೆ ಸುಸ್ತಿಯಾಗುವ ಮಧ್ಯಮ ಅವಧಿ ಹಾಗೂ ದೀರ್ಘಾವಧಿ ಕೃಷಿ ಸಾಲವನ್ನು ಕೃಷಿ ಚಟುವಟಿಕೆಗಳಿಗಾಗಿ ತೆಗೆದುಕೊಂಡಿದ್ದರೆ, ಅಂತಹ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಆಗಲಿದೆ. ಆದರೆ, ಫೆಬ್ರವರಿ 29, 2024ಕ್ಕೆ ಸಾಲದ ಸಂಪೂರ್ಣ ಅಸಲು ಪಾವತಿ ಮಾಡಿರಬೇಕು.

* ಕೃಷಿಯೇತರ ಸಾಲಕ್ಕೆ ಇದು ಅನ್ವಯವಾಗುವುದಿಲ್ಲ.
* ನಿಗದಿತ ಸಹಕಾರವು ಸಂಘಗಳನ್ನು ಹೊರತುಪಡಿಸಿ ಬೇರೆ ಕಡೆ ಸಾಲವನ್ನು ತೆಗೆದುಕೊಂಡಿದ್ದರೆ ಈ ಯೋಜನೆಯನ್ನು ಅನ್ವಯವಾಗುವುದಿಲ್ಲ.

ಈ ಸುದ್ದಿ ಓದಿ:- ʻಗೃಹಜ್ಯೋತಿʼ ಫಲಾನುಭವಿಗಳಿಗೆ ಸರ್ಕಾರದಿಂದ ಮಹತ್ವದ ಘೋಷಣೆ.!

* ಪಶು ಸಂಗೋಪನೆ ಮತ್ತು ಹೈನುಗಾರಿಕೆ, ಪ್ಲಾಂಟೇಶನ್ ಹಾಗೂ ತೋಟಗಾರಿಕೆ, ಮೀನು ಕೃಷಿ, ರೇಷ್ಮೆ ಕೃಷಿ, ಸಾವಯವ ಕೃಷಿ, ಭೂ ಅಭಿವೃದ್ಧಿ ನಬಾರ್ಡ್ ಸೂಚಿಸಿದ ಮೊದಲಾದ ಕೃಷಿ ಕಾರಣಗಳಿಗಾಗಿ ಮಧ್ಯಮ ಅವಧಿಯ ಮತ್ತು ದೀರ್ಘಾವಧಿಯ ಸಾಲ ತೆಗೆದುಕೊಂಡಿದ್ರೆ ಅಂತಹ ಸಾಲದ ಬಡ್ಡಿ ಮನ್ನಾ ಮಾಡಲಾಗುವುದು.

* ರಾಜ್ಯ ಸರ್ಕಾರವು ಬಡ್ಡಿ ಮನ್ನಾ, ಪದ್ಧತಿಯ ಅಡಿ ಕೃಷಿ ಸಾಲ ಹಾಗೂ ಕೃಷಿ ಚಟುವಟಿಕೆಗಳಿಗಾಗಿ ಸಾಲವನ್ನು ತೆಗೆದುಕೊಂಡ್ರೆ ಅನ್ವಯವಾಗುತ್ತದೆ.
* 10 ಲಕ್ಷದವರೆಗಿನ ಸಾಲದ ಬಡ್ಡಿಯನ್ನು ಮನ್ನಾ ಮಾಡಲಾಗುತ್ತದೆ.
* ಫೆಬ್ರುವರಿ 29, 2024ಕ್ಕೆ ಸಂಪೂರ್ಣ ಅಸಲು ಪಾವತಿ ಮಾಡಿದ್ರೆ ಮಾತ್ರ, ಬಡ್ಡಿ ಮನ್ನಾ ಮಾಡಲಾಗುತ್ತದೆ.
* ಮಾರಟೋರಿಯಂ ಅವಧಿಯಲ್ಲಿ ಸುಸ್ತಿ ಯಾಗುವ ಸಾಲಕ್ಕೆ ಬಡ್ಡಿ ಮನ್ನಾ ಅನ್ವಯವಾಗಲಿದೆ.

ಯಾವ ಯಾವ ರೈತರಿಗೆ ಸಿಗುತ್ತೆ ಲಾಭ?

ಕೃಷಿ ಸಹಕಾರಿ ಬ್ಯಾಂಕ್ ಹಾಗೂ ಜಿಲ್ಲಾ ಸಹಕಾರಿ ಬ್ಯಾಂಕ್ಗಳಲಿ ಸಾಲ ಮಾಡಿರುವ ರೈತರಿಗೆ ಈ ಬಡ್ಡಿ ಮನ್ನಾ ಯೋಜನೆಯ ಲಾಭ ಸಿಗಲಿದೆ. ಅಲ್ಪಾವಧಿ ಸಾಲದ ಅವಧಿಯು ಒಂದು ವರ್ಷದ್ದಾಗಿದ್ದು, ಈಗಾಗಲೇ ಇದಕ್ಕೆ ಬಡ್ಡಿ ರಹಿತವಾಗಿ ಸಾಲ ನೀಡಲಾಗುತ್ತದೆ.

1೦ ವರ್ಷಗಳ ಅವಧಿಗೆ ಶೇ.3 ರ ಬಡ್ಡಿದರಲ್ಲಿ ಮಧ್ಯಮಾವಧಿ ಸಾಲ ನೀಡಲಾಗುತ್ತದೆ. ಹಾಗೂ 1೦ ವರ್ಷಕ್ಕೂ ಹೆಚ್ಚಿನ ಅವಧಿಗೆ ನೀಡುವ ಸಾಲವು ದೀರ್ಘಾವಧಿ ಸಾಲ ಆಗಿರುತ್ತದೆ. ಈ ಸಾಲಗಳಲ್ಲಿ ಚಾಲ್ತಿ ಸಾಲ ಇಲ್ಲವೇ ಸುಸ್ತಿ ಸಾಲಗಾರರಾಗಿರುವವರು ಈ ಬಡ್ಡಿ ಮನ್ನಾ ಯೋಜನೆ ಲಾಭ ಪಡೆಯಬಹುದಾಗಿದೆ. ಇದಕ್ಕೆ ಕೆಲವೊಂದು ನಿಬಂಧನೆಗಳನ್ನು ಹೇರಲಾಗಿದೆ.

ನಿಬಂಧನೆಗಳು

2023ರ ಡಿಸೆಂಬರ್ 31 ಕ್ಕೆ ಸುಸ್ತಿಯಾಗುವ ಮಧ್ಯಮಾವಧಿ ಅಥವಾ ದೀರ್ಘಾವಧಿ ಸಾಲವನ್ನು ಕೃಷಿ ಚಟುವಟಿಕೆಗಳಿಗಾಗಿ ತೆಗೆದುಕೊಂಡಿದ್ದರೆ ಅಂತವರ ಸಾಲದ ಮೇಲಿನ ಬಡ್ಡಿಯು ಮನ್ನಾ ಆಗಲಿದೆ. ಈ ರೀತಿ ಬಡ್ಡಿ ಮನ್ನಾ ಆಗಬೇಕು ಎಂದಾದರೆ ರೈತರು ಫೆ.28 ರೊಳಗೆ ಪಡೆದ ಸಾಲದ ಅಸಲನ್ನು ಪಾವತಿ ಮಾಡಿರಬೇಕು.

ಕೃಷಿ ಸಬಂಧಿತ ಚಟುವಟಿಗಳು ಹಾಗೂ ತೋಟಗಳನ್ನು ಅಭಿವೃದ್ಧಿಪಡಿಸುವ ಸಲುವಾಗಿ ತೆಗೆದುಕೊಂಡ ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲದ ಮೇಲಿನ ಬಡ್ಡಿಯು ಮನ್ನಾ ಆಗಲಿದೆ. ಇದು ಕೃಷಿಯೇತರ ಸಾಲಗಳಿಗೆ ಅನ್ವಯಿಸುವುದಿಲ್ಲ. ಗರಿಷ್ಟ 1೦ ಲಕ್ಷ ರೂ.ಗಳ ವರಿಗೆ ಸಾಲ ಪಡೆದವರಿಗೆ ಇದು ಅನ್ವಯಿಸುತ್ತದೆ.